ರಿಹನ್ನಾ ಪಾಕಿಸ್ಥಾನ ಬೆಂಬಲಿತೆ ಎಂದ ಸಂಘಪರಿವಾರ ; ಅಪಪ್ರಚಾರವನ್ನು ಬಯಲಿಗೆಳೆದ ಮಾಧ್ಯಮಗಳು

Prasthutha|

- Advertisement -

ನವದೆಹಲಿ: ರೈತರ ಮುಷ್ಕರಕ್ಕೆ ಒಗ್ಗಟ್ಟನ್ನು ಘೋಷಿಸಿರುವ ಪಾಪ್ ಗಾಯಕಿ ರಿಹಾನ್ನಾ ಅವರ ಟ್ವೀಟ್ ಜಾಗತಿಕವಾಗಿ ಅಲೆಗಳನ್ನು ಸೃಷ್ಟಿಸುತ್ತಿರುವಾಗ ಸಂಘಪರಿವಾರ ಮತ್ತು ಬಿಜೆಪಿ ಐಟಿ ಸೆಲ್ ಅಪಪ್ರಚಾರಗಳಿಗೆ ಮಾಧ್ಯಮಗಳು ಬ್ರೇಕ್ ಹಾಕಿದೆ. ಸಂಘ ಪರಿವಾರದ ವಿಮರ್ಶಕರನ್ನು ಪಾಕಿಸ್ತಾನ ಪರವಾಗಿ ಚಿತ್ರೀಕರಿಸುವ ಸಂಘಪರಿವಾರ ರಿಹಾನ್ನಾ ವಿರುದ್ಧವೂ ಅದೇ ಅಸ್ತ್ರವನ್ನು ಪ್ರಯೋಗಿಸಿದೆ. “ರಿಹಾನ್ನಾಳ ನೈಜ ಮುಖವನ್ನು ಗುರುತಿಸಿ” ಎಂಬ ಶೀರ್ಷಿಕೆಯೊಂದಿಗೆ ಸಂಘಪರಿವಾರದ ಕಾರ್ಯಕರ್ತರು  ರಿಹಾನ್ನಾ ಪಾಕಿಸ್ತಾನದ ಧ್ವಜವನ್ನು ಹಿಡಿದ ನಕಲಿ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ಸಾವಿರಾರು ಸಂಘಪರಿವಾರ ಪರ ಪ್ರೊಫೈಲ್‌ಗಳು ಹಂಚಿಕೊಂಡಿರುವ ಈ ಚಿತ್ರ ನಕಲಿ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

 2019 ರ ಕ್ರಿಕೆಟ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ಧ್ವಜವನ್ನು ಹಿಡಿದಿರುವ ರಿಹಾನ್ನಾ ಅವರ ಫೋಟೋವನ್ನು ಸಂಘಪರಿವಾರದ ಕಾರ್ಯಕರ್ತರು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿ ಪಾಕಿಸ್ತಾನ ಧ್ವಜವನ್ನಾಗಿ ಮಾಡಿದ್ದರು. ಸಂಘಪರಿವಾರದ ನಕಲಿ ಪ್ರಚಾರವು ಬಹಿರಂಗವಾದಾಗ ಅನೇಕ ಜನರು ತಮ್ಮ ಪೋಸ್ಟನ್ನು ಅಳಿಸಿದ್ದಾರೆ. ಫೆಬ್ರವರಿ 3 ರಂದು ನಕಲಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅನೇಕ ಜನರು ಈ ಚಿತ್ರವನ್ನು ಹಂಚಿಕೊಂಡಿದ್ದರು.

- Advertisement -

‘ರಿಹಾನ್ನಾ ಸರಕಾರ ವಿರೋಧಿ ಗುಂಪಿನ ಹೊಸ ದೇವತೆ. ಆದರೆ ಅವಳು ನಿಜವಾಗಿಯೂ ಯಾರೆಂದು ಈಗ ನೀವು ಅರ್ಥಮಾಡಿಕೊಳ್ಳಬಹುದು’  ಎಂದು ರಿಹಾನ್ನಾ ಪಾಕಿಸ್ತಾನದ ಧ್ವಜವನ್ನು ಹಿಡಿದಿರುವ ನಕಲಿ ಚಿತ್ರದ ಶೀರ್ಷಿಕೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿತ್ತು.

Join Whatsapp