ರಾಜ್ಯದ ಜನರಿಗೆ ಬಿಗ್‌ ಶಾಕ್‌: ಬಸ್‌ ಪ್ರಯಾಣ ದರ ಶೇ. 15ರಷ್ಟು ಏರಿಕೆ ಸಾಧ್ಯತೆ

Prasthutha|

- Advertisement -

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಆ ಮೂಲಕ ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಸರ್ಕಾರ ಬಿಗ್​ ಶಾಕ್ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸರ್ಕಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.

- Advertisement -

ಈಗಾಗಲೇ ಬಸ್​ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ ​ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೆಎಸ್ ​ಆರ್ ​ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್​ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಎಸ್ ​ಆರ್ ​ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು, ಬಳಿಕ ಮತ್ತೆ ಹೆಚ್ಚಳ ಮಾಡಿಲ್ಲ.

ಬಿಎಂಟಿಸಿ: ಈ ವರ್ಷ ಆಗಸ್ಟ್​​ನಲ್ಲಿ ಶೇಕಡಾ 42 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2014 ರಲ್ಲಿ ಟಿಕೆಟ್ ದರ ಹೆಚ್ಚಳ ಆಗಿತ್ತು ಮತ್ತೆ ಹೆಚ್ಚಳ ಆಗಿರಲಿಲ್ಲ.

ಕೆಡಬ್ಲ್ಯೂಆರ್ ​ಟಿಸಿ: ಶೇಕಡಾ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್​ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020 ರ ಫೆಬ್ರುವರಿಯಲ್ಲಿ ಕೊನೆಯದಾಗಿ ಕೆಡಬ್ಲ್ಯೂಆರ್ ​ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು.

ಕೆಕೆಆರ್​ ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್​ನಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಕೆಆರ್​ಟಿಸಿ ಟಿಕೆಟ್ ದರ ಹೆಚ್ಚಳ ಮಾಡಿದ್ದು ಬಿಟ್ಟರೆ ಮತ್ತೆ ಮಾಡಿಲ್ಲ.



Join Whatsapp