ರಷ್ಯಾ – ಉಕ್ರೇನ್ ಸಂಘರ್ಷ : ಯುದ್ಧ ನಿಲ್ಲಿಸುವಂತೆ ಭಾರತ ಆಗ್ರಹ

Prasthutha|

ನವದೆಹಲಿ: ಅಲ್ಪ ಸಮಯಗಳ ಕಾಲ ತಣ್ಣಗಾಗಿದ್ದ ಉಕ್ರೇನ್‌ ಮತ್ತು ರಷ್ಯಾ ನಡುವಿನ ಸಂಘರ್ಷವು ಮತ್ತೆ ಉಲ್ಬಣಗೊಂಡಿರುವ ಬಗ್ಗೆ ಭಾರತ ಪ್ರತಿಕ್ರಿಯಿಸಿದೆ.

- Advertisement -

ಈ ಬಗ್ಗೆ ಮರುಕ ವ್ಯಕ್ತಪಡಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಘರ್ಷದ ಕೊನೆಗೆ ಬೇಕಾದ ಎಲ್ಲಾ ಬಗೆಯ ಬೆಂಬಲವನ್ನು ನೀಡಲಾಗುವುದು ಎಂದು ಹೇಳಿದೆ.

ಹಗೆತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯುದ್ಧವನ್ನು ಈ ಕೂಡಲೇ ನಿಲ್ಲಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

- Advertisement -

ರಷ್ಯಾವು ಇಂದು ಉಕ್ರೇನ್ ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳಿಗೆ ಏಕಕಾಲಕ್ಕೆ ಸರಣಿ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಸಾವು ನೋವುಗಳು ಸಂಭವಿಸಿವೆ.



Join Whatsapp