ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಹೊರನಡೆದ ರಾಹುಲ್ ಗಾಂಧಿ

Prasthutha|

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲಡಾಖ್ ನ ಗಡಿಯಲ್ಲಿ ಚೀನಾ ಆಕ್ರಮಣದ ಬಗ್ಗೆ ಮಾತನಾಡಲು ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ  ಇಂದು ನಡೆದ ರಕ್ಷಣಾ ಕುರಿತ ಸಂಸದೀಯ ಸಮಿತಿ ಸಭೆಯ ಮಧ್ಯೆಯೇ ಎದ್ದು ಹೊರ ಬಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

- Advertisement -

ಸಭೆಯಲ್ಲಿ ಸೈನಿಕರನ್ನು ಹೇಗೆ ಉತ್ತಮವಾಗಿ ಸಜ್ಜುಗೊಳಿಸಬೇಕೆಂಬುದರ ಬಗ್ಗೆ ಚರ್ಚಿಸುವ ಬದಲು, ಸಶಸ್ತ್ರ ಪಡೆಗಳ ಸಮವಸ್ತ್ರದ ಬಗ್ಗೆ ಚರ್ಚಿಸುವಲ್ಲಿ ಸಮಿತಿಯ ಸಮಯ ವ್ಯರ್ಥ ಮಾಡಲಾಯಿತು ಎಂದು ರಾಹಲ್ ಗಾಂಧಿ ಹೇಳಿದ್ದಾರೆ.

ಈ ಸಂದರ್ಭ ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ಜುವಾಲ್ ಓರಮ್, ರಾಹುಲ್ ಗಾಂಧಿಯವರಿಗೆ ಲಡಾಖ್ ನ ಗಡಿಯಲ್ಲಿ ಚೀನಾ ಆಕ್ರಮಣದ ಬಗ್ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಈ ಕಾರಣದಿಂದ ಅವರು ಸಭೆಯಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ.

- Advertisement -

ರಾಹುಲ್ ಗಾಂಧಿ ಸಭೆಯಿಂದ ಹೊರ ನಡೆಯುತ್ತಿದ್ದಂತೆ, ಕಾಂಗ್ರೆಸ್ ಸದಸ್ಯ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಕೂಡ ಹೊರನಡೆದಿದ್ದಾರೆ ಎನ್ನಲಾಗಿದೆ.

Join Whatsapp