ಯೋಗಿ ವಿರುದ್ಧ ದ್ವೇಷ ಭಾಷಣ: ಶಾಸಕ ಸ್ಥಾನದಿಂದ ಆಝಂ ಖಾನ್ ವಜಾ

Prasthutha|

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ,ಜೈಲು ಶಿಕ್ಷೆಗೊಳಗಾದ ನಾಯಕ ಆಝಂ ಖಾನ್ ರನ್ನು ವಿಧಾನ ಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ವಿಧಾನ ಸಭಾ ಸ್ಪೀಕರ್ ಕಛೇರಿ ಸ್ಪಷ್ಟಪಡಿಸಿದೆ.

- Advertisement -

ಆಝಂ ಖಾನ್ ಸಮಾಜ ವಾದಿ ಪಕ್ಷದ ನಾಯಕ ಹಾಗೂ ರಾಂಪುರ ಕ್ಷೇತ್ರದ ಶಾಸಕರೂ ಆಗಿದ್ದರು. ಇದೀಗ ಶಾಸಕ ಸ್ಥಾನದಿಂದ ಖಾನ್ ರನ್ನು ಅನರ್ಹಗೊಳಿಸಲಾಗಿದೆ.

ಆಝಂ ಖಾನ್ ಅವರನ್ನು, 2019 ರಲ್ಲಿ ಉತ್ತರ ಪ್ರದೇಶ ಮುಖ್ಯಮತ್ರಿ ಯೋಗಿ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ 2000 ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಗೊಳಪಡಿಸಲಾಗಿದೆ.



Join Whatsapp