ಯು.ಎಸ್.ಕ್ಯಾಪಿಟೊಲ್ ಕಟ್ಟಡಕ್ಕೆ ನುಗ್ಗಿದ ಟ್ರಂಪ್ ಬೆಂಬಲಿಗರು: ಓರ್ವ ಪೊಲೀಸ್ ಮೃತ್ಯು

Prasthutha|

ಅಧ್ಯಕ್ಷೀಯ ಸ್ಥಾನಕ್ಕೆ ಚುನಾಯಿತಗೊಂಡಿರುವ ಜೋ ಬೈಡನ್ ರನ್ನು ಕಾಂಗ್ರೆಸ್ ದೃಢೀಕರಿಸುವುದನ್ನು ತಡೆಯುವುದಕ್ಕಾಗಿ  ಕ್ಯಾಪಿಟೊಲ್ ಕಟ್ಟಡಕ್ಕೆ ನುಗ್ಗಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರೊಂದಿಗಿನ ಸಂಘರ್ಷದಲ್ಲಿ ಓರ್ವ ಯುಎಸ್ ಕ್ಯಾಪಿಟೊಲ್ ಪೊಲೀಸ್ ಸಾವನ್ನಪ್ಪಿದ್ದಾನೆ.

- Advertisement -

ಯುಎಸ್ ಕ್ಯಾಪಿಟೊಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಗಲಭೆಕೋರರನ್ನು ದೈಹಿಕವಾಗಿ ಎದುರಿಸುತ್ತಿದ್ದ ವೇಳೆ ಅಧಿಕಾರಿ ಬ್ರಯಾನ್ ಡಿ ಸಿಕ್ನಿಕ್ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಅವರು ತನ್ನ ವಿಭಾಗೀಯ ಕಚೇರಿಗೆ ಮರಳಿದ ನಂತರ ಕುಸಿದುಬಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು” ಎಂದು ಹೇಳಿಕೆ ತಿಳಿಸಿದೆ.

- Advertisement -

ಕ್ಯಾಪಿಟೊಲ್ ಕಟ್ಟಡಕ್ಕೆ ನುಗ್ಗುವ ವೇಳೆ ಉಂಟಾದ ಸಂಘರ್ಷದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ತಲುಪಿದೆ. ಮೂವರು ಟ್ರಂಪ್ ಪರ ಸದಸ್ಯರು ಗಾಯಾಳುಗಳಾಗಿ ಸಾವನ್ನಪ್ಪಿದರೆ, ಇನ್ನೋರ್ವನನ್ನು ಕಟ್ಟಡದೊಳಗೆ ಗುಂಡಿಕ್ಕಲಾಯಿತು.

ತಾನು ಸೋತ ನವೆಂಬರ್ 3ರ ಚುನಾವಣೆಯನ್ನು ರದ್ದುಗೊಳಿಸುವುದಕ್ಕಾಗಿ ಹೋರಾಡುವಂತೆ ಟ್ರಂಪ್ ರ್ಯಾಲಿಯೊಂದರಲ್ಲಿ ತನ್ನ ಬೆಂಬಲಿಗರನ್ನು ಹುರಿದುಂಬಿಸಿದ್ದರು. ಬುಧವಾರದಂದು ಕ್ಯಾಪಿಟೋಲ್ ಕಟ್ಟಡವನ್ನು ನುಗ್ಗಿದ ಟ್ರಂಪ್ ಬೆಂಬಲಿಗರು ಕಿಟಕಿ ಗಾಜುಗಳನ್ನು ಪುಡಿಮಾಡುತ್ತಾ ಕೊಳ್ಳೆ ಹೊಡೆಯುತ್ತಾ ಸೆನೆಟರ್ ಗಳು ಮತ್ತು ಪ್ರತಿನಿಧಿ ಸಭೆಯ ಸದಸ್ಯರು ಅಲ್ಲಿಂದ ತೆರಳುವಂತೆ ಮಾಡಿದ್ದರು.

Join Whatsapp