ಯುಪಿಎಸ್ ಸಿ ಪರೀಕ್ಷೆಯಲ್ಲಿ 42 ಮುಸ್ಲಿಮ್ ಅಭ್ಯರ್ಥಿಗಳ ಆಯ್ಕೆ | ಟಾಪ್ 100ರಲ್ಲಿ 1 ಸ್ಥಾನ ಮಾತ್ರ

Prasthutha|

ನವದೆಹಲಿ : ಯುಪಿಎಸ್ ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2019ರ ತಂಡದಲ್ಲಿ ಒಟ್ಟು 42 ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 40ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಕೇವಲ 28 ಮುಸ್ಲಿಮ್ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ವಿ ಪಡೆದಿದ್ದರು.

- Advertisement -

ಸಫ್ನಾ ನಸ್ರುದ್ದೀನ್ 45ನೇ ಸ್ಥಾನ ಪಡೆದು, ಮುಸ್ಲಿಮ್ ಅಭ್ಯರ್ಥಿಗಳೊಳಗೆ ಪ್ರಥಮ ಮತ್ತು ಟಾಪ್ 100ರಲ್ಲಿ ಏಕೈಕ ಅಭ್ಯರ್ಥಿಯಾಗಿ ಗಮನ ಸೆಳೆದಿದ್ದಾರೆ. ಮಂಗಳವಾರ ಪ್ರಕಟಗೊಂಡಿರುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 829 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ ಮುಸ್ಲಿಮ್ ಅಭ್ಯರ್ಥಿಗಳ ಪ್ರಮಾಣ ಶೇ.5ರಷ್ಟು ಮಾತ್ರವಿದೆ.

2016ರ ತಂಡದಲ್ಲಿ ಮೊದಲ ಬಾರಿ 50 ಮುಸ್ಲಿಮ್ ಅಭ್ಯರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು. ಅವರಲ್ಲಿ ಟಾಪ್ 100ರಲ್ಲಿ 10 ಮಂದಿ ಇದ್ದುದು ಇನ್ನೂ ವಿಶೇಷವಾಗಿತ್ತು. 2017ರ ತಂಡದಲ್ಲೂ 50 ಮಂದಿ ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು.

- Advertisement -

2012, 2013, 2014 ಮತ್ತು 2015ರ ತಂಡಗಳಲ್ಲಿ ಕ್ರಮವಾಗಿ 30, 34, 38, 36 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ. 15ರಷ್ಟು ಪಾಲು ಮುಸ್ಲಿಮರಿದ್ದರೂ, ನಾಗರಿಕ ಪರೀಕ್ಷೆಯಲ್ಲಿ ಆಯ್ಕೆಯಾಗುವವರ ಸಂಖ್ಯೆ ತೀರಾ ಕಡಿಮೆಯಿತ್ತು. 2006ರ ಸಾಚಾರ್ ಸಮಿತಿ ವರದಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಯಿತು. ಆ ನಂತರ ಮುಸ್ಲಿಮರೂ ಸರ್ಕಾರಿ ಸೇವೆಗಳಲ್ಲಿ ಹೆಚ್ಚು ಭಾಗಿಯಾಗುವ ಬಗ್ಗೆ ಜಾಗೃತಿ ಮೂಡಲಾರಂಭಿಸಿತ್ತು. ಇದೀಗ 2016ರ ನಂತರ ಶೇ.5ರಷ್ಟು ಆಸುಪಾಸಿನಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.



Join Whatsapp