ಮೋದಿ ದ್ವೇಷ ಬಿತ್ತುತ್ತಿರುವುದು ಧರ್ಮ-ಧರ್ಮಗಳ ನಡುವೆಯಲ್ಲ, ಸಹೋದರತೆಯಿಂದ ಬಾಳಿ-ಬದುಕುತ್ತಿರುವ ಭಾರತೀಯರ ನಡುವೆ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತದೆ ಎಂದು ಪ್ರಧಾನಿ ಮೋದಿಯವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿಯಾಗಿ ಮಾತನಾಡಿದರೆ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್ ಐಆರ್ ದಾಖಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಗಾ,ದ್ವೇಷ,ಅಸೂಯೆ,ಇಲ್ಲದೆ ಅಧಿಕಾರ ನಡೆಸುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಮೋದಿ ದ್ವೇಷ, ಹಗೆತನದ ಭಾಷಣ ಮಾಡುತ್ತಿರುವುದು ಭಾರತಕ್ಕೆ ಅತ್ಯಂತ ಗಂಭೀರ ಹಾಗೂ ಅಪಾಯದ ಮುನ್ಸೂಚನೆ. ನರೇಂದ್ರ ಮೋದಿಯವರು ದ್ವೇಷ ಬಿತ್ತುತ್ತಿರುವುದು ಧರ್ಮ-ಧರ್ಮಗಳ ನಡುವೆಯಲ್ಲ,ಪರಸ್ಪರ ಪ್ರೀತಿ,ವಿಸ್ವಾಸ,ಸಹೋದರತೆಯಿಂದ ಬಾಳಿ-ಬದುಕುತ್ತಿರುವ ಭಾರತೀಯರ ನಡುವೆ. ಬಹಿರಂಗವಾಗಿ ಇಷ್ಟು ನಿರ್ಲಜ್ಜ,ದುಷ್ಟತನದಿಂದ ಒಬ್ಬ ಪ್ರಧಾನಿಯಾದವರು ಮಾತಾಡಿದ್ದು ಭಾರತದ ಇತಿಹಾಸದಲ್ಲೇ ಮೊದಲು ಎಂದರು.


ಚುನಾವಣೆಯ ಸೋಲಿನ ಮುನ್ಸೂಚನೆಯಿಂದ, ಅಧಿಕಾರದ ದಾಹಕ್ಕಾಗಿ ಭಾರತದ ಬಹುತ್ವಕ್ಕೆ ಕೊಳ್ಳಿ ಇಡುತ್ತಿದ್ದಾರೆ.ಇಂತಹ ಅಪಾಯವನ್ನು ಮತದಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ವಿಚಲಿತರಾಗಿರುವ ಪ್ರಧಾನಿಗಳ ಬಳಿ ಆರೋಪ ಮಾಡಲು ಯಾವ ಅಸ್ತ್ರವೂ ಉಳಿದಿಲ್ಲ ಎಂಬ ಕಾರಣಕ್ಕೆ ದ್ವೇಷ ಬಿತ್ತುತ್ತಿದ್ದಾರೆ. ಸ್ವತಃ ಮಾಂಗಲ್ಯ ಕಟ್ಟಿದ ಪತ್ನಿಯನ್ನು ದೂರವಿಟ್ಟಿರುವ ಪ್ರಧಾನಿಗಳು, ಬೇರೆ ಮಹಿಳೆಯರ ಮಾಂಗಲ್ಯದ ಹುಸಿ ಕಾಳಜಿ ವಹಿಸುತ್ತಿರುವುದು ಮೋಸಳೆ ಕಣ್ಣೀರು ಸುರಿಸುವಂತಿದೆ. ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿರುವ ಮೋದಿ,ಕೂಡಲೆ ದೇಶದ ಮಹಿಳೆಯರಿಗೆ ಕ್ಷಮೆಯಾಚಿಸಬೇಕು. ಚುನಾವಣಾ ಆಯೋಗಕ್ಕೆ ನಿಜವಾಗಿಯೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ನರೇಂದ್ರ ಮೋದಿ ವಿರುದ್ದ ಕ್ರಮ ಜರುಗಿಸಬೇಕು. ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಹೇಳಿದ್ದಾರೆ.

Join Whatsapp