ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ: ಕರ್ಣಿ ಸೇನೆಯ ಸದಸ್ಯನ ಬಂಧನ

Prasthutha|

ಕೋಮು ಘಟನೆಗೆ ಸಂಬಂಧಿಸಿ ದ್ವೇಷದ ಹೇಳಿಕೆ ನೀಡಿದ್ದ ಆರೋಪದಲ್ಲಿ ಘಾಜಿಯಾಬಾದ್ ಪೊಲೀಸರು ಕರ್ಣಿ ಸೇನೆಯ ಸದಸ್ಯ ಎನ್ನಲಾದ ಶೇಖರ್ ಚೌಹಾಣ್ (32) ಎಂಬಾತನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕರ್ಣಿ ಸೇನಾ ಸದಸ್ಯನೆಂದು ಹೇಳಿಕೊಳ್ಳುವ ಶೇಖರ್ ಚೌಹಾಣ್, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಕಳೆದ ಮಾರ್ಚ್‌ ತಿಂಗಳಲ್ಲಿ ಇಲ್ಲಿನ ದಸ್ನಾ ದೇವಸ್ಥಾನದ ಹೊರಗೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಮುಸ್ಲಿಂ ಬಾಲಕನೋರ್ವ ದೇವಸ್ಥಾನದ ಆವರಣದ ನೀರನ್ನು ಕುಡಿದ ಕಾರಣಕ್ಕಾಗಿ ಥಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶೇಖರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಶೇಖರ್ ನನ್ನು ಆತನ ರಾಜನಗರ ಎಕ್ಸ್ ಟೆನ್ಸನ್ ನಿವಾಸದಿಂದ ಬಂಧಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಮಸೂರಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಅದಾದ ಬಳಿಕ ಆತ ಪರಾರಿಯಾಗಿದ್ದ. ಆತನ ಇತರ ಸಹಚರರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಸೂರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ, 504, 505 ಮತ್ತು ಐಟಿ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿ ಶೇಖರ್, ಶಾಮ್ಲಿ ಮೂಲದವನು ಮತ್ತು ವೈರಲ್ ಆದ ಕ್ಲಿಪ್‌ನಲ್ಲಿ ತನ್ನನ್ನು ತಾನು ಕರ್ಣಿ ಸೇನಾ ಸದಸ್ಯನೆಂದು ಪರಿಚಯಿಸಿಕೊಂಡಿದ್ದಾನೆ. ಅದರಲ್ಲಿ ಆತ, ಅಲ್ಪಸಂಖ್ಯಾತ ಸಮುದಾಯದ ಗರ್ಭಿಣಿ ಮಹಿಳೆಯರ ಮೇಲೆ ಹಲ್ಲೆ ನಡೆಸಲು ಹೇಳಿದ್ದಾನೆ.

- Advertisement -



Join Whatsapp