ಮುಸ್ಲಿಂ ವಿರೋಧಿ ಪೋಸ್ಟ್ | ಫೇಸ್ ಬುಕ್ ನ ವಿವಾದಾತ್ಮಕ ಅಧಿಕಾರಿ ಅಂಖಿ ದಾಸ್ ಕ್ಷಮೆ ಯಾಚನೆ

Prasthutha|


ನವದೆಹಲಿ : ಮುಸ್ಲಿಂ ವಿರೋಧಿ ಸಂದೇಶವುಳ್ಳ ಪೋಸ್ಟ್ ಶೇರ್ ಮಾಡಿದ್ದುದಕ್ಕಾಗಿ ಫೇಸ್ ಬುಕ್ ಇಂಡಿಯಾ ಎಕ್ಸಿಕ್ಯೂಟಿವ್ ಅಂಖಿ ದಾಸ್ ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ಮುಸ್ಲಿಮ್ ವಿರೋಧಿ ಹೇಳಿಕೆಯುಳ್ಳ ಪೋಸ್ಟ್ ಒಂದನ್ನು ಶೇರ್ ಮಾಡಿದ್ದುದಕ್ಕೆ ತನ್ನ ಮುಸ್ಲಿಂ ಸಹೋದ್ಯೋಗಿಗಳ ಕ್ಷಮೆ ಯಾಚಿಸುತ್ತೇನೆ ಎಂದು ಅಂಖಿ ದಾಸ್ ಆಂತರಿಕ ಸಂದೇಶ ಬರೆದಿರುವುದಾಗಿ ‘ಬುಝ್ ಫೀಡ್ ನ್ಯೂಸ್’ ವರದಿ ಮಾಡಿದೆ.ಈ ಹಿಂದೆ ದೇಶಾದ್ಯಂತ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭ ಪೊಲೀಸ್ ಅಧಿಕಾರಿಯೊಬ್ಬರು ಪೋಸ್ಟ್ ಮಾಡಿದ್ದ ಈ ಮುಸ್ಲಿಂ ವಿರೋಧಿ ಸಂದೇಶವನ್ನು ಅಂಕಿ ದಾಸ್ ಶೇರ್ ಮಾಡಿದ್ದರು. ಇದೀಗ, ಈ ಸಂಬಂಧ ಅವರು ಕ್ಷಮೆ ಯಾಚಿಸಿದ್ದಾರೆ.

- Advertisement -

ಇಸ್ಲಾಮ್ ಗೆ ಮಸಿಬಳಿಯುವ ಉದ್ದೇಶ ನನ್ನದಾಗಿರಲಿಲ್ಲ. ಸ್ತ್ರೀವಾದ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಬಗ್ಗೆ ನಾನು ಆಳವಾದ ನಂಬಿಕೆ ಹೊಂದಿದ್ದೇನೆ. ನಾನು ಎಲ್ಲ ದೃಷ್ಟಿಕೋನಗಳನ್ನು ಗೌರವಿಸುತ್ತೇನೆ. ಕಳೆದ ಎರಡು ದಿನಗಳಿಂದ, ನನ್ನ ಪೋಸ್ಟ್ ಅನ್ನು ಯಾವ ರೀತಿ ಸ್ವೀಕರಿಸಲಾಗುತ್ತಿದೆ ಎಂಬ ಬಗ್ಗೆ ಕೇಳುತ್ತಿದ್ದೇನೆ. ಹೀಗಾಗಿ ನಾನು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದೇನೆ. ಇದರಿಂದ ಯಾವುದೇ ರೀತಿಯ ನೋವಾಗಿದ್ದರೆ, ಕಂಪೆನಿಯ ನನ್ನ ಎಲ್ಲ ಮುಸ್ಲಿಂ ಸಹೋದ್ಯೋಗಿಗಳು ಸೇರಿದಂತೆ, ಎಲ್ಲರಲ್ಲೂ ನಾನು ಪ್ರಾಮಾಣಿಕವಾಗಿ ವಿಷಾಧಿಸುತ್ತೇನೆ ಎಂದು ಅಂಖಿ ದಾಸ್ ಹೇಳಿರುವುದಾಗಿ ವರದಿ ತಿಳಿಸಿದೆ.

ಆಡಳಿತ ಪಕ್ಷ ಬಿಜೆಪಿಯ ನಾಯಕರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳದಿರಲು ಅಂಖಿ ದಾಸ್ ಫೇಸ್ ಬುಕ್ ನ ತನ್ನ ಅಧೀನ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಇತ್ತೀಚೆಗೆ ‘ದ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು. ಫೇಸ್ ಬುಕ್ ತನ್ನ ದ್ವೇಷ ಭಾಷಣ ವಿರೋಧಿ ನೀತಿಗೆ ವಿರುದ್ಧವಾಗಿ ಭಾರತದಲ್ಲಿ ನಡೆದುಕೊಂಡಿದೆ ಎಂದು ವರದಿ ತಿಳಿಸಿತ್ತು. ಹೀಗಾಗಿ, ಭಾರತದಲ್ಲಿ ಫೇಸ್ ಬುಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಫೇಸ್ ಬುಕ್ ನ ಪಾಲಿಸಿ ಡೈರೆಕ್ಟರ್ ಆಗಿರುವ ಅಂಖಿ ದಾಸ್ ಬಿಜೆಪಿ ನಾಯಕರೊಂದಿಗೆ ಹೊಂದಿರುವ ನಂಟುಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

Join Whatsapp