ಮುಂದಿನ 40 ವರ್ಷಗಳು ಬಿಜೆಪಿಯ ಯುಗಗಳು – ಅಮಿತ್ ಶಾ

Prasthutha|

ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು, ಭಾರತ ದೇಶದಲ್ಲಿ ಬಿಜೆಪಿಯ ಯುಗವಾಗಲಿಕ್ಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

- Advertisement -

ತೆಲಂಗಾಣದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ‘ ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಧ್ವಜ ಹಾರಾಡಲಿಕ್ಕಿದೆ. ಇನ್ನು ಮುಂದಿನ ದಿನಗಳು ಬಿಜೆಪಿಯ ಯುಗಗಳಾಗಲಿಕ್ಕಿದೆ’ ಎಂದಿದ್ದಾರೆ.

‘ದೇಶವನ್ನು ಹಿಂದಕ್ಕೆ ತಳ್ಳಲು ಕಾರಣವಾದ ಕುಟುಂಬ ರಾಜಕಾರಣವನ್ನು ತೊಲಗಿಸಿ ,ಭಾರತವನ್ನು ವಿಶ್ವಗುರುವನ್ನಾಗಿ ಮಾಡುತ್ತೇವೆ’ ಎಂದೂ ಈ ಸಂದರ್ಭದಲ್ಲಿ ಹೇಳಿದ್ದಾರೆ.

Join Whatsapp