ಭುವನೇಶ್ವರ: ಮಹಿಳಾ ಸಬಲೀಕರಣವು ದೇಶದ ಸಬಲೀಕರಣವಾಗಿದೆ. ಯಾವುದೇ ಕುಟುಂಬ, ಸಮಾಜ, ರಾಜ್ಯ ಅಥವಾ ದೇಶವು ಮಹಿಳೆಯರನ್ನು ಸಬಲೀಕರಣಗೊಳಿಸದೇ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಬಿಜು ಜನತಾದಳದ(ಬಿಜೆಡಿ) ಮುಖ್ಯಸ್ಥ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಒತ್ತಿ ಹೇಳಿದ್ದಾರೆ.
ಬಿಜೆಡಿ ಪಕ್ಷದ 24ನೇ ಪ್ರತಿಷ್ಠಾನ ದಿನದಂದು ಮಾತನಾಡಿದ ಅವರು, ”ಚುನಾವಣೆಗಳು ಬಂದಾಗ, ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಸಾಕಷ್ಟು ಹೇಳುತ್ತವೆ. ಆದರೆ ಚುನಾವಣೆ ಮುಗಿದ ನಂತರ ಅದನ್ನು ಮರೆತುಬಿಡುತ್ತಾರೆ. ರಾಜಕೀಯ ರಂಗದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು. ಬಿಜೆಡಿ ಪ್ರಾದೇಶಿಕ ಪಕ್ಷವಾಗಿದ್ದರೂ, ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲು ತನ್ನ ಧ್ವನಿಯನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ನವೀನ್ ಹೇಳಿದ್ದಾರೆ.
ಮಹಿಳೆಯರಿಗೆ ಹಕ್ಕು ಸಿಗುವವರೆಗೂ ಬಿಜು ಜನತಾದಳ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಮುಂದುವರಿಸಲಿದೆ ಎಂದು ಭರವಸೆ ನೀಡಿದರು
ಇನ್ನು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಟಿಕೆಟ್ ನೀಡಿದ ಏಕೈಕ ಪಕ್ಷ ಬಿಜು ಜನತಾದಳ ಎಂದು ತಿಳಿಸಿದ್ದಾರೆ.