ಮಕ್ಕಳ ಅಶ್ಲೀಲ ವಿಡಿಯೋ ಹರಿಯಬಿಟ್ಟ ಇಬ್ಬರ ಬಂಧನ

Prasthutha|

ಮಂಗಳೂರು: ಮಗುವಿನ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದ ಮೇಲೆ ಇಬ್ಬರ ವಿರುದ್ಧ ಮಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -


ಅಶಿ ಹೈದರ್ ಹಾಗೂ ಇಲ್ಯಾಸ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಶಿ ಹೈದರ್ ಹಾಗೂ ಇಲ್ಯಾಸ್ ಮಗುವಿನ ಅಶ್ಲೀಲ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಂಡು ಫೇಸ್ ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ, ಅಪ್‌ ಲೋಡ್ ಮಾಡಿದ್ದರು ಎಂದು ಸೈಬರ್ ಟಿಪ್ ಲೈನ್ ಮುಖಾಂತರ ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು, ಆರೋಪ ದೃಢಪಡಿಸಿಕೊಂಡು ಆರೋಪಿಗಳ ವಿರುದ್ಧ ಕಲಂ 67(ಬಿ) ಐಟಿ ಕಾಯ್ದೆ ಯಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಂಗಳೂರು ಸೈಬರ್ ಪೊಲೀಸರು ಪ್ರಕರಣವನ್ನು ನ್ಯಾಯಾಲಯದಲ್ಲಿ ನಿವೇದಿಸಿದ್ದಾರೆ.



Join Whatsapp