ಮಂಡ್ಯದಲ್ಲಿ ಅತಿ ಹೆಚ್ಚು, ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಮತದಾನ

Prasthutha|

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಇಂದು ನಡೆದಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇಂದು ನಡೆದ ಮತದಾನದಲ್ಲಿ ಮಂಡ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದ್ದರೆ, ಬೆಂಗಳೂರಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ.

- Advertisement -

ಸಂಜೆ 5 ಗಂಟೆಯವರೆಗೆ ಕೇಂದ್ರ ಚುನಾವಣಾ ಆಯೋಗ ನೀಡಿದ ಮಾಹಿತಿಯ ಪ್ರಕಾರ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.63.90ರಷ್ಟು ಮಾತ್ರ ಮತದಾನವಾಗಿದೆ.

14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ

  1. ಉಡುಪಿ-ಚಿಕ್ಕಮಗಳೂರು – ಶೇ.72.13
  2. ಹಾಸನ- ಶೇ.72.13
  3. ದಕ್ಷಿಣ ಕನ್ನಡ- ಶೇ.71.83
  4. ಚಿತ್ರದುರ್ಗ- ಶೇ.67
  5. ತುಮಕೂರು – ಶೇ.72.10
  6. ಮಂಡ್ಯ- ಶೇ.74.87
  7. ಮೈಸೂರು- ಶೇ.65.85
  8. ಚಾಮರಾಜನಗರ- ಶೇ.69.60
  9. ಬೆಂಗಳೂರು ಗ್ರಾಮಾಂತರ – ಶೇ.61.78
  10. ಬೆಂಗಳೂರು ಉತ್ತರ- ಶೇ.50.84
  11. ಬೆಂಗಳೂರು ಕೇಂದ್ರ – ಶೇ.48.61
  12. ಬೆಂಗಳೂರು ದಕ್ಷಿಣ- ಶೇ.49.37
  13. ಚಿಕ್ಕಬಳ್ಳಾಪುರ – ಶೇ.70.97
  14. ಕೋಲಾರ- ಶೇ.71.26
Join Whatsapp