ಮಂಗಳೂರು: ಮೊಬೈಲ್ ಶೋರೂಂ ಗೆ ನುಗ್ಗಿದ ಕಳ್ಳರು ದುಬಾರಿ ಬೆಲೆಯ ಮೊಬೈಲ್ ಗಳನ್ನು ಕಳವುಗೈದಿರುವ ಘಟನೆ ಮಂಗಳೂರಿನ ಮೇಪಲ್ ಶೋರೂಂ ನಲ್ಲಿ ನಡೆದಿದೆ. ಕಟ್ಟಡದ ಹಿಂಬದಿಯ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಆ್ಯಪಲ್ ಐ ಫೋನ್ ಕಳವು ಮಾಡಿದ್ದಾರೆ.
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಇಂದು ಶೋರೂಂ ತೆರೆದಾಗ ಕೃತ್ಯ ಬೆಳಕಿಗೆ ಬಂದಿದ್ದು, ಶೋರೂಂ ಒಳಗಿರುವ ಸಿಸಿ ಟಿವಿ ಕ್ಯಾಮರಾ ಹಾಗೂ ಹಾರ್ಡ್ ಡಿಸ್ಕ್ ಅನ್ನು ಕೊಂಡೊಯ್ದಿದ್ದಾರೆ. ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿದ್ದವರಿಂದಲೇ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಐ ಫೋನ್ ಗಳೊಂದಿಗೆ ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ಸಾಧನಗಳನ್ನು ಕಳ್ಳರು ದೋಚಿದ್ದಾರೆ. ಸ್ಥಳಕ್ಕೆ ಕದ್ರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಮಂಗಳೂರು ಸಿಸಿಬಿ ಪೊಲೀಸರ ತಂಡ ಶೋರೂಂ ಗೆ ಭೇಟಿ ನೀಡಿದೆ.