ಭಾರತದ ಆರ್ಥಿಕ ಸ್ಥಿತಿ ದುರ್ಬಲವಾಗಿ ಮುಂದುವರೆಯಲಿದೆ : ಮೂಡೀಸ್

Prasthutha|

- Advertisement -

ಹೊಸದಿಲ್ಲಿ : ಭಾರತದ ಆರ್ಥಿಕ ಸ್ಥಿತಿ ದುರ್ಬಲವಾಗಿ ಮುಂದುವರೆಯಲಿದ್ದು 2021 ರಲ್ಲಿ ಪ್ರಮುಖ ಆರ್ಥಿಕ ಹೊರೆಯ ಸವಾಲನ್ನು ತಂದೊಡ್ಡಲಿದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಹೇಳಿದೆ.

ಸರ್ಕಾರ ಆದಾಯ ಏರಿಕೆ ಕ್ರಮಗಳನ್ನು ಜಾರಿಗೊಳಿಸಿರುವ ಸಾಧನೆಯ ದಾಖಲೆಗಳನ್ನು ನೋಡಿದರೆ ಹಣಕಾಸು ಸ್ಥಿತಿಯ ಬಲವರ್ಧನೆ ದುರ್ಬಲವಾಗಿರಲಿದೆ ಎಂದು ಮೂಡೀಸ್ ಅಭಿಪ್ರಾಯಪಟ್ಟಿದೆ.

- Advertisement -

ಬಜೆಟ್ ನಲ್ಲಿ ಸರ್ಕಾರಕ್ಕೆ 2026 ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.5 ರಷ್ಟಕ್ಕೆ ಹೊಂದುವ ಗುರಿ ಇದೆ. ಈ ಪರಿಸ್ಥಿತಿ ಉಂಟಾಗಬೇಕಾದರೆ ನಾಲ್ಕು ವರ್ಷಗಳಿಗೂ ಮೀರಿ ವಾರ್ಷಿಕ ವಿತ್ತೀಯ ಕೊರತೆಯನ್ನು ಸರಾಸರಿ ಶೇ.0.5 ರಷ್ಟು ತಗ್ಗಿಸಬೇಕಾಗುತ್ತದೆ.

ಭಾರತದ ಅತಿ ಹೆಚ್ಚು ಸಾಲದ ಹೊರೆಯನ್ನು ಗಮನಿಸಿದರೆ, ಸಾಮಾನ್ಯ ಜಿಡಿಪಿ ಸ್ಥಿರ ಬೆಳವಣಿಗೆ ಸಾಧಿಸುವವರೆಗೂ, ಈ ಆರ್ಥಿಕ ಕ್ರೋಡೀಕರಣದ ವೇಗ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಲವರ್ಧನೆಗೆ ಅಡ್ಡಿಯಾಗಿರಲಿದೆ ಎಂದು ಮೂಡೀಸ್ ಹೇಳಿದೆ.

ಮೂಡೀಸ್ ಪ್ರಕಾರ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 2021 ಹಾಗೂ 2022 ನೇ ಸಾಲಿನಲ್ಲಿ ಅಂದಾಜಿಗಿಂತಲೂ ಕಡಿಮೆ ಇರಬೇಕಾಗಿದ್ದು, 2021 ರ ನಾಲ್ಕನೇ ತ್ರೈಮಾಸಿಕದಲ್ಲಿ ಬಲವಾದ ಆದಾಯ ಉತ್ಪಾದನೆ ಹಾಗೂ 2022 ರ ಆರ್ಥಿಕ ವರ್ಷದಲ್ಲಿ ಸಾಮಾನ್ಯ ಜಿಡಿಪಿ ಬೆಳವಣಿಗೆಯ ಪ್ರಮಾಣ ಹೆಚ್ಚಾಗಿರಬೇಕಿದೆ.

Join Whatsapp