ಬೆಂಗಳೂರು ಬೇರೆ ಭಾಷೆಯವರ ಕೈಯಲ್ಲಿದೆ: ವಾಟಾಳ್ ನಾಗರಾಜ್

Prasthutha|

ಬೆಂಗಳೂರು: “ನಗರದಲ್ಲಿ ಕೊಲೆ ಸುಲಿಗೆಗಳು ನಿರಂತರವಾಗಿ ಹೆಚ್ಚುತ್ತಿದ್ದು ಭೀತಿಯ ವಾತಾವರಣ ನಿರ್ಮಾಣವಾಗಿದೆ. ನಗರ ಬೇರೆ ಭಾಷೆಯವರ ಕೈಯಲ್ಲಿದೆ. ಇದು ಕಣ್ಣೀರಿನ ಕಥೆ” ಎಂದು ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಂಗಳೂರು ನಗರದಲ್ಲಿ ಕೊಲೆ, ಬೆದರಿಕೆ ಲೂಟಿ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ಆಗಿದೆ ಎಂದು ಹೇಳುತ್ತಿಲ್ಲ. ಹತ್ತು ವರ್ಷಗಳಿಂದ ಬೆಂಗಳೂರು ಹಾಳಾಗುತ್ತಿದೆ. ಬೆಂಗಳೂರಿಗೆ ಬಹಳ ಜನ ವಲಸೆ ಬಂದಿದ್ದಾರೆ. ಬೆಂಗಳೂರು ಬೇರೆ ಭಾಷೆಯವರ ಕೈಯಲ್ಲಿದೆ. ಕನ್ನಡಿಗರು ಕಡಿಮೆಯಾಗುತ್ತಿದ್ದಾರೆ. ಎಲ್ಲೆಲ್ಲೂ ಹೊರಗಡೆಯವರೇ ಇದ್ದಾರೆ. ಅಂಗಡಿ, ಹೋಟೆಲ್, ರಸ್ತೆಯಲ್ಲಿ ಪಾನಿಪೂರಿ ಮಾರುವವರು, ಕಡ್ಲೆ ಕಾಯಿ ಮಾರುವವರು ಕೂಡ ಹೊರಗಿನವರು” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

“ಮೊನ್ನೆ ದಿನ ಒಂದೇ ಕಚೇರಿಯಲ್ಲಿ ಜೋಡಿ ಕೊಲೆ ಆಗಿದೆ. ನಗರದಲ್ಲಿ ಭಯ-ಭೀತಿಯ ವಾತಾವರಣ ನಿರ್ಮಾಣವಾಗಿದೆ.ಕಾರುಗಳನ್ನು ಬೆನ್ನಟ್ಟುತ್ತಾರೆ, ಹೆದರಿಸುತ್ತಾರೆ, ಬೆದರಿಸುತ್ತಾರೆ. ಬೆಂಗಳೂರು ಉಳಿಸಬೇಕಾಗಿದೆ. ಹೊರಗಡೆಯಿಂದ ಬಂದವರಿಂದ ಕೊಲೆ, ಸುಲಿಗೆ ಆಗುತ್ತಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಾಮಾಣಿಕವಾಗಿ ಚಿಂತನೆ ಮಾಡಬೇಕು” ಎಂದು ವಾಟಾಳ್ ಹೇಳಿದರು.

Join Whatsapp