ಬೈಡೆನ್ ರ ಪ್ಯಾಲೆಸ್ತೀನ್ ಪರವಾದ ನಿಲುವನ್ನು ಸ್ವಾಗತಿಸಿದ ಅರಬ್ ಜಗತ್ತು

Prasthutha|

- Advertisement -

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉತ್ತಮ ಸಂಬಂಧವನ್ನು ಸ್ಥಾಪಿಸುವುದಾಗಿ ಬೈಡೆನ್ ಆಡಳಿತದ ಘೋಷಣೆ ಮತ್ತು ಸ್ವತಂತ್ರ ಪ್ಯಾಲೇಸ್ತೀನ್ ರಾಷ್ಟ್ರವನ್ನು ಬೆಂಬಲಿಸುವುದಾಗಿ ಹೇಳಿದ ಅಮೆರಿಕದ ನಿಲುವನ್ನು ಅರಬ್ ಜಗತ್ತು ಸ್ವಾಗತಿಸಿದೆ.  ಅಮೇರಿಕಾದ ಈ ಹೇಳಿಕೆಯು ಪಶ್ಚಿಮ ಏಷ್ಯಾದ ಸಮಸ್ಯೆ ಪರಿಹಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಹೇಳಿವೆ.

ಪ್ಯಾಲೇಸ್ಟಿನಿಯನ್ ಸಮುದಾಯದ ಬಗ್ಗೆ “ಸಹಾನುಭೂತಿಯ ನಿಲುವು” ತೆಗೆದುಕೊಳ್ಳುವುದಾಗಿ ಬಿಡೆನ್ ಆಡಳಿತ ನಿನ್ನೆ ಹೇಳಿಕೆ ನೀಡಿತ್ತು. ವಿಶ್ವಸಂಸ್ಥೆಯ ಯು.ಎಸ್. ಆಕ್ಟಿಂಗ್ ಪ್ರತಿನಿಧಿ ರಿಚರ್ಡ್ ಮಿಲ್ಸ್, ವಿಶ್ವಸಂಸ್ಥೆಯ ರಕ್ಷಣಾ ಸಮಿತಿಯಲ್ಲಿ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ಯಾಲೆಸ್ತೀನ್ ನಲ್ಲಿ ರಾಯಭಾರ ಕಚೇರಿಯನ್ನು ತೆರೆಯಲು ಸಿದ್ಧ ಎಂದು ಅಮೆರಿಕ ಹೇಳಿದೆ. ಪ್ಯಾಲೇಸ್ತೀನಿಯನ್ ಜನರಿಗೆ ಆರ್ಥಿಕ ಅಭಿವೃದ್ಧಿ ಮತ್ತು ಮಾನವೀಯ ನೆರವು ನೀಡುವ ಯೋಜನೆಗಳನ್ನು ಪುನಃ ಸ್ಥಾಪಿಸಲು ಬೈಡೆನ್ ಆಡಳಿತ ಸಿದ್ಧವಾಗಿದೆ.

- Advertisement -

ಟ್ರಂಪ್ ಆಡಳಿತ ಕೊನೆಗೊಳಿಸಿದ್ದ ಪ್ಯಾಲೆಸ್ತೀನ್ ಜೊತೆ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವ ಬೈಡೆನ್ ಅವರ ಕ್ರಮವನ್ನು ಅರಬ್ ಮಾಧ್ಯಮಗಳು ಶ್ಲಾಘಿಸಿದೆ. ಪ್ಯಾಲೆಸ್ತೀನ್ ಗೆ ಹಣಕಾಸಿನ ನೆರವು ಪುನಃಸ್ಥಾಪಿಸಲು ಅಮೇರಿಕಾ ಯೋಜನೆ ರೂಪಿಸಿದೆ. ಟ್ರಂಪ್ ಆಡಳಿತವು 2018 ರಲ್ಲಿ ಪ್ಯಾಲೆಸ್ತೀನ್ ಗೆ 200 ಮಿಲಿಯನ್ ಡಾಲರ್ ನೆರವನ್ನು ಕಡಿತಗೊಳಿಸಿರುವುದನ್ನು ಅರಬ್ ಜಗತ್ತು ವಿರೋಧಿಸಿದ್ದವು. ಬೈಡೆನ್ ಆಡಳಿತವು ವಿವಿಧ ಅರಬ್ ದೇಶಗಳ ಜನರ ಮೇಲೆ ಅಮೇರಿಕಾದ ನಿರ್ಬಂಧವನ್ನು ತೆಗೆದುಹಾಕಿದ್ದನ್ನು ಅರಬ್ ಜಗತ್ತು ಸ್ವಾಗತಿಸಿತ್ತು.



Join Whatsapp