ಬೆಂಗಳೂರು: ಚೀನಾದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್(HMPV) ಬೆಂಗಳೂರಿನ ಎರಡು ಪುಟ್ಟ ಕಂಮ್ಮಗಳಲ್ಲಿ ಪತ್ತೆಯಾಗಿದೆ.
ಮೊದಲಿಗೆ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದ್ದರೆ, ಇದೀಗ 3 ತಿಂಗಳ ಹೆಣ್ಣು ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದೆ. ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ವೈರಸ್ ಹೊಸದೇನಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದೆ. ಇಷ್ಟೇ ಅಲ್ಲ ರಾಜ್ಯದ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ.
3 ತಿಂಗಳ ಮಗುವಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಆದರೂ ವೈರಸ್ ಪತ್ತೆಯಾಗಿದೆ. ಇದಕ್ಕೂ ಮೊದಲು 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿತ್ತು.
ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಇದೇ ವೇಳೆ ರಾಜ್ಯದ ಜನತೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಕುರಿತು ಮಾರ್ಗೂಚಿಯನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ರಾಜ್ಯದ ಪ್ರಕರಣ ಕುರಿತು ಮಾತನಾಡಿದ್ದಾರೆ. ಚಳಿಗಾಲದಲ್ಲಿ ಈ ರೀತಿಯ ವೈರಸ್ ಕುರಿತು ಎಚ್ಚರಿಕೆ ಅಗತ್ಯ. ಇದು ಹೊಸದೇನಲ್ಲ. ಹಳೇ ವೈರಸ್. 2001ರಲ್ಲೇ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲೂ ಈ ವೈರಸ್ ಇದೆ. ಆದರೆ ಪರಿಣಾಕಾರಿಯಾಗಿಲ್ಲ. ಕೇವಲ ಶೇಕಡಾ 1 ರಷ್ಟು ಮಾತ್ರ ತೀವ್ರತೆ ಇದೆ ಅನ್ನೋ ಮಾಹಿತಿ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಮ್ಯುನಿಟಿ ಕಡಿಮೆ ಇರುವ ಮಕ್ಕಳಿಗೆ ಬೇಗನೆ ಈ ವೈರಸ್ ದಾಳಿ ಮಾಡಲಿದೆ. ಮಕ್ಕಳು ಹಾಗೂ ಹಿರಿಯರು ತೀವ್ರ ಮುಂಜಾಗ್ರತೆ ವಹಿಸಬೇಕು. ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ, ಸದ್ಯ ರಾಜ್ಯದ ಪ್ರಕರಣದ ಸ್ಯಾಂಪಲ್ ಪುಣೆಗೆ ಕಳುಹಿಸುವ ಕುರಿತು ಚರ್ಚಿಸುತ್ತೇವೆ ಎಂದು ದಿನೇಶ್ ಗಂಡೂರಾವ್ ಹೇಳಿದ್ದಾರೆ. ಇದೇ ವೇಳೆ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದಿದ್ದಾರೆ.
ಏನು ಮಾಡಬೇಕು
ನೆಗಡಿ, ಕೆಮ್ಮು, ಶೀತದ ಸಂದರ್ಭದಲ್ಲಿ ಕರ್ಚೀಫ್, ಟಿಶ್ಯೂ ಪೇಪರ್ ಬಳಸಿ, ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ
ನಿಮ್ಮ ಕೈಗಳನ್ನು ಸೋಪ್‌ನಿಂದ ಶುಚಿಯಾಗಿ ತೊಳೆಯಿರಿ, ಅಥವಾ ಸ್ಯಾನಿಟೈಸರ್ ಬಳಸಿ
ಜನಸಂದಣಿ ಪ್ರದೇಶಗಳಿಂದ ದೂರವಿರಿ
ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದ ಜನರ ಸಂಪರ್ಕದಿಂದ ದೂರವಿರಿ
ಮುಚ್ಚಿದ ಕೋಣೆಗಳಿಂದ ತೆರೆದ, ಗಾಳಿ, ಬೆಳಕುವ ಇರುವ ಕೊಠಡಿಗಳಲ್ಲಿರಿ
ಆರೋಗ್ಯ ಸಮಸ್ಸೆಗಳಿದ್ದರೆ ಮನೆಯಲ್ಲೇ ಇರಿ, ಜನರ ಸಂಪರ್ಕ ಮಾಡಬೇಡಿ
ಚೆನ್ನಾಗಿ ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸಿ
ಏನು ಮಾಡಬಾರದು?
ಬಳಸಿದ ಖರ್ಚೀಫ್, ಟಿಶ್ಯೂ ಪೇಪರ್ ಬಳಸಬೇಡಿ
ಶೀತ, ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇದ್ದವರ ಜೊತೆ ಸಂಪರ್ಕ ಮಾಡಬೇಡಿ, ಟವೆಲ್ ಸೇರಿದಂತೆ ಇತರ ವಸ್ತುಗಳನ್ನು ಹಂಚಿಕೊಳ್ಳಬೇಡಿ
ಮೂಗು, ಬಾಯಿ, ಕಣ್ಣುಗಳನ್ನು ಕೈಗಳಿಂದ ಪದೇ ಪದೇ ಮುಟ್ಟಬೇಡಿ
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬೇಡಿ
ವೈದ್ಯರ ಭೇಟಿ ಮಾಡದೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ