ಬಿಹಾರ ಮೊದಲ ಹಂತದ ಮತದಾನ ಆರಂಭ | ಕೊರೊನಾ ನಡುವೆಯೂ ನಡೆಯುತ್ತಿರುವ ಮೊದಲ ಚುನಾವಣೆ

Prasthutha|

ಪಾಟ್ನಾ : ಬಿಹಾರದ ವಿಧಾನಸಭೆಗೆ ನಡೆಯಲಿರುವ ಮೂರು ಹಂತದ ಚುನಾವಣೆಯಲ್ಲಿ, ಇಂದು ಪ್ರಥಮ ಹಂತದ ಮತದಾನ ಆರಂಭವಾಗಿದೆ. 243 ಸದಸ್ಯ ಬಲದ ವಿಧಾನಸಭೆಗೆ ಇಂದು 71 ಸ್ಥಾನಗಳಿಗೆ ಮತದಾನ ನಡೆಯಿದೆ. 71 ವಿಧಾನಸಭಾ ಕ್ಷೇತ್ರಗಳಲ್ಲಿನ ಸುಮಾರು 2 ಕೋಟಿಗೂ ಅಧಿಕ ಮತದಾರರು 1,066 ಅಭ್ಯರ್ಥಿಗಳಲ್ಲಿ ಯಾರು ಉತ್ತಮರು ಎಂಬುದನ್ನು ಆಯ್ಕೆ ಮಾಡಲಿದ್ದಾರೆ.

- Advertisement -

ಬೆಳಗ್ಗೆ 9:30ರ ವರೆಗೆ ವರೆಗೆ ಶೇ. 7.1ರಷ್ಟು ಮತದಾನ ಆಗಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ 19 ಸೋಂಕಿನ ಸಂಕಷ್ಟದ ಸಂದರ್ಭದಲ್ಲೂ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಕೋವಿಡ್ 19 ಸೋಂಕು ಹರಡದಂತೆ, ತಡೆಯುವ ನಿಟ್ಟಿನಲ್ಲಿ ಮತದಾನ ಮಾಡಲು ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮತದಾನ ಮಾಡುವಾಗ ಸುರಕ್ಷತೆಯಿಂದಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನ್ಯಾಯ ಮತ್ತು ಉದ್ಯೋಗಕ್ಕಾಗಿ ‘ಮಹಾಮೈತ್ರಿ’ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದಿನ ಎರಡು ಹಂತದ ಚುನಾವಣೆ ನ.3 ಮತ್ತು ನ.7ರಂದು ನಡೆಯಲಿವೆ. ನ.10ಕ್ಕೆ ಫಲಿತಾಂಶ ಹೊರಬೀಳಲಿದೆ.

Join Whatsapp