ಬಂಟ್ವಾಳ: ವಿಮೆನ್ಸ್ ಫ್ರಂಟ್ ನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

Prasthutha|

ಬಂಟ್ವಾಳ: ನ್ಯಾಷನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ವಲಯ ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿ.ಸಿ ರೋಡಿನಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

- Advertisement -


ಮುಖ್ಯ ಅತಿಥಿಗಳಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಣ ಸಂಯೋಜಕಿ ಕೆ. ಸುಜಾತ ಕುಮಾರಿ, ವಿಮೆನ್ ಇಂಡಿಯಾ ಮುವ್ಮೆಂಟ್ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನ, ನ್ಯಾಷನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ಜಿಲ್ಲಾ ಕಾರ್ಯದರ್ಶಿ ಅಫ್ರೀನ, ನ್ಯಾಷನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ವಲಯಾಧ್ಯಕ್ಷೆ ಮುಮ್ತಾಝ್ ಮತ್ತಿತರರು ಉಪಸ್ಥಿತರಿದ್ದರು.


ಸ್ಥಳೀಯ ಕೌನ್ಸಿಲರ್ ಮತ್ತು ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಾಜಿ ರಾಜ್ಯಾಧ್ಯಕ್ಷೆ ಝೀನತ್ ಗೂಡಿನಬಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಡಾ. ಫರ್ಹಾನ ಬಿ.ಎ.ಎಮ್.ಎಸ್, ಉತ್ತಮ ಶಕ್ಷಕಿ ಪ್ರಶಸ್ತಿ ಪಡೆದ ಕೆ. ಸುಜಾತ ಕುಮಾರಿ, ರಾಷ್ಟ್ರಮಟ್ಟದ ಟೇಕ್ವಾಂಡೋ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ಫಾತಿಮಾ ಮುಸ್ಕಾನ್ ಅವರನ್ನು ಸನ್ಮಾನಿಸಲಾಯಿತು.

- Advertisement -


ಅಫ್ರೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಹನಾಝ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಝುಬೈದ ಧನ್ಯವಾದಗೈದರು. ಅಝೀಲ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp