ಫೋರ್ಬ್ಸ್ 2020: ನಿರ್ಮಲಾ ಸೀತಾರಾಮನ್ ಗೆ 41ನೇ ಸ್ಥಾನ

Prasthutha|

ನವದೆಹಲಿ: ಖ್ಯಾತ ನಿಯತಕಾಲಿಕೆ ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿಶಾಲಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅಮೆರಿಕದ ಚುನಾಯಿತ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ಎಚ್.ಸಿ.ಎಲ್ ಎಂಟರ್ ಪ್ರೈಸ್ ಸಿಇಒ ರೋಶ್ನಿ ನದಾರ್ ಮಲ್ಹೋತ್ರಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

- Advertisement -

ಕಳೆದ ವರ್ಷದ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಸೀತಾರಾಮನ್ ಈ ಬಾರಿ 41ನೇ ಸ್ಥಾನ ಪಡೆದಿದ್ದಾರೆ. ನದಾರ್ ಮಲ್ಹೋತ್ರಾ 55ನೇ ಸ್ಥಾನ, ಮಜುಂದಾರ್ ಶಾ(ಭಾರತದ ಅತ್ಯಂತ ಶ್ರೀಮಂತ ಮಹಿಳೆ) 68ನೇ ಸ್ಥಾನ ಹಾಗೂ ಲ್ಯಾಂಡ್ ಮಾರ್ಕ್ ಗ್ರೂಪ್ ನ ಅಧ್ಯಕ್ಷೆ ರೇಣುಕಾ ಜಗ್ಟಿಯಾನಿ 98ನೇ ಸ್ಥಾನ ಪಡೆದಿದ್ದಾರೆ.

ಪಟ್ಟಿಯ ಅಗ್ರಸ್ಥಾನದಲ್ಲಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದು, ಸತತವಾಗಿ 10 ವರ್ಷಗಳಿಂದಲೂ ಮೊದಲ ಸ್ಥಾನ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟೀನ್ ಲಾಗಾರ್ಡ್ ಎರಡನೇ ಸ್ಥಾನದಲ್ಲಿದ್ದು, ಕಮಲಾ ಹ್ಯಾರಿಸ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

- Advertisement -

Join Whatsapp