ಫೋರ್ಬ್ಸ್ ಮಧ್ಯಪ್ರಾಚ್ಯ ಪಟ್ಟಿ | ಉನ್ನತ 30 ಭಾರತೀಯ ಉದ್ಯಮಿಗಳ ಪಟ್ಟಿಯಲ್ಲಿ ತುಂಬೆ ಮೊಯ್ದಿನ್

Prasthutha|

ಜನವರಿ 17ರ ರವಿವಾರದಂದು ಘೋಷಿಸಲಾದ ಫೋರ್ಬ್ಸ್ ಮಧ್ಯಪ್ರಾಚ್ಯ ಪಟ್ಟಿಯಲ್ಲಿ ಅರಬ್ ಜಗತ್ತಿನ ಉನ್ನತ 30 ಭಾರತೀಯ ಉದ್ಯಮಿ ನಾಯಕರ ಮಧ್ಯೆ ಯುಎಇ ಮೂಲದ ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದಿನ್ ಸ್ಥಾನ ಪಡೆದಿದ್ದಾರೆ.

- Advertisement -

ಲುಲು ಗ್ರೂಪ್ ನ ಚೆಯರ್ ಮೆನ್ ಯೂಸುಪ್ಫಲಿ ಎಂ.ಎ. ಮೊದಲ ಸ್ಥಾನದಲ್ಲಿದ್ದಾರೆ. ಲ್ಯಾಂಡ್ ಮಾರ್ಕ್ ಗ್ರೂಪ್ ನ ರೇಣುಕಾ ಜಗ್ತಿಯಾನಿ, ಜಿಇಎಂಎಸ್ನ ಸನ್ನಿ ವರ್ಕೆ, ಆರ್.ಪಿ. ಗ್ರೂಪ್ನ ಸುನೀಲ್ ವಾಸ್ವಾನಿ, ರವಿ ಪಿಳ್ಳೈ, ಪಿ.ಎನ್.ಸಿ ಮೆನನ್ ಮತ್ತು ಡಾ.ಶಂಶೀರ್ ಅಲಿ ನಂತರ ಕ್ರಮವಾಗಿ ಸ್ಥಾನ ಪಡೆದವರು.

30 ಮಂದಿಯ ಪಟ್ಟಿಯಲ್ಲಿ ತುಂಬೆ ಮೊಯ್ದಿನ್ 11ನೇ ಸ್ಥಾನ ಪಡೆದಿದ್ದಾರೆ. ಚಿಲ್ಲರೆ, ಕೈಗಾರಿಕೆ, ವೈದ್ಯಕೀಯ ಸೇವೆ, ಬ್ಯಾಂಕಿಂಗ್ ಮತ್ತು ಹಣಕಾಸಿನಂತಹ ವಿವಿಧ ಕ್ಷೇತ್ರಗಳ ಉದ್ಯಮ ನಾಯಕರು ಈ ಪಟ್ಟಿಯಲ್ಲಿದ್ದಾರೆ.

- Advertisement -

1998ರಲ್ಲಿ ತುಂಬೆ ಗ್ರೂಪ್ ಸ್ಥಾಪನೆಯಾದಂದಿನಿಂದ ಮೊಯ್ದಿನ್ ಅವರು, ಆರೋಗ್ಯ ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ಆರೋಗ್ಯ ಕ್ಷೇತ್ರದ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಜ್ಮಾನ್ ನಲ್ಲಿ 272 ಮಿಲಿಯನ್ ಡಾಲರ್ ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ ತುಂಬೆ ಯುನಿವರ್ಸಿಟಿ ಆಸ್ಪತ್ರೆವೊಂದರಲ್ಲೇ ಪ್ರತಿನಿತ್ಯವೂ 20,000ಕ್ಕೂ ಅಧಿಕ ರೋಗಿಗಳಿಗೆ ಶುಶ್ರೂಷೆ ನೀಡಬಹುದಾಗಿದೆ.

Join Whatsapp