ನವದೆಹಲಿ : ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧದ 2009ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಹೊಸ ನ್ಯಾಯಪೀಠ ಸೆ.10ರಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಹೇಳಿದೆ.
2009ರ ಪ್ರಕರಣವು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ‘ತೆಹಲ್ಕಾ’ ಪತ್ರಿಕೆಗೆ ನೀಡಿದ್ದ ಸಂದರ್ಶನದ ಕುರಿತಾಗಿದೆ. ನ್ಯಾಯಾಧೀಶರ ಭ್ರಷ್ಟಾಚಾರದ ಆರೋಪಗಳನ್ನು ಯಾರೊಬ್ಬರು ಸಾರ್ವಜನಿಕರ ಮುಂದಿಡಬಹುದೇ? ಎಂಬ ಅಂಶ ಈ ಪ್ರಕರಣದಲ್ಲಿದೆ. ಹೀಗಾಗಿ ಪ್ರಕರಣದ ವಿಚಾರಣೆ ಸೂಕ್ತ ನ್ಯಾಯಪೀಠದ ಮುಂದಿಡಬೇಕಾಗಿದೆ ಎಂದು ಕೋರ್ಟ್ ತಿಳಿಸಿದೆ.
ಪ್ರಶಾಂತ್ ಭೂಷಣ್ ಅವರು ಈಗಾಗಲೇ ತಮ್ಮ ವಿವಾದಾತ್ಮಕ ಎರಡು ಟ್ವೀಟ್ ಗಳಿಗಾಗಿ ದೋಷಿ ಎಂದು ಸುಪ್ರೀಂ ಕೋರ್ಟ್ ನಿಂದ ಪರಿಗಣಿಸಲ್ಪಟ್ಟಿದ್ದಾರೆ. ಈ ವಿಷಯದಲ್ಲಿ ಕೋರ್ಟ್ ನ ಕ್ಷಮೆ ಕೇಳಲು ನಿರಾಕರಿಸುವ ಮೂಲಕ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.