ಪ್ರಶಸ್ತಿಗಾಗಿ ಎನ್ಕೌಂಟರ್ : ಆಘಾತಕಾರಿ ವರದಿ

Prasthutha|

- Advertisement -

ಶ್ರೀನಗರ: 20 ಲಕ್ಷ ರೂ.ಗಳ ಬಹುಮಾನ ಪಡೆಯುವ ಆಸೆಯಿಂದ ಸೇನಾ ಕ್ಯಾಪ್ಟನ್ ನೇತೃತ್ವದಲ್ಲಿ ಶೋಪಿಯಾನ್‌ನಲ್ಲಿ ಮೂವರು ಕಾಶ್ಮೀರಿ ಯುವಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಕ್ಯಾಪ್ಟನ್ ಭೂಪೇಂದ್ರ ಸಿಂಗ್ ನೇತೃತ್ವದಲ್ಲಿ ಜುಲೈ 18 ರಂದು ಈ ನಕಲಿ ಎನ್ಕೌಂಟರ್ ನಡೆದಿತ್ತು. ಮೃತರನ್ನು ರಾಜೌರಿಯ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ್ (20), ಅಬ್ರಾರ್ ಅಹ್ಮದ್ (25) ಮತ್ತು ಮಹಮ್ಮದ್ ಅಬ್ರಾರ್ (16) ಎಂದು ಗುರುತಿಸಲಾಗಿದೆ. ಕ್ಯಾಪ್ಟನ್ ಭೂಪೇಂದ್ರ ಸಿಂಗ್, ಸ್ಥಳೀಯರಾದ ತಬೀಶ್ ನಜೀರ್ ಮತ್ತು ಬಿಲಾಲ್ ಅಹ್ಮದ್ ಲೋನ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಮೂವರ ವಿರುದ್ಧ ಶೋಪಿಯಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1400 ಪುಟಗಳ ಚಾರ್ಜ್‌ಶೀಟ್ ದಾಖಲಿಸಲಾಗಿದೆ.

ಮೊದಲೇ ಸಿದ್ಧಪಡಿಸಿದ್ದ ವಾಹನದಲ್ಲಿ ಯುವಕರನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ವಾಹನದಿಂದ ಇಳಿದು ಮುಂದೆ ನಡೆಯುವಂತೆ ಸೂಚನೆ ನೀಡಿದ ನಂತರ ಹಿಂಭಾಗದಿಂದ ಗುಂಡು ಹಾರಿಸಲಾಗಿತ್ತು. ಕೊಲೆ ಮಾಡಿದ ನಂತರ ಅಕ್ರಮವಾಗಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಮೃತದೇಹಗಳ ಬಳಿ ಉಳಿಸಿಕೊಂಡಿದ್ದರು. ಎರಡು ಪಿಸ್ತೂಲ್‌ಗಳು, ರೈಫಲ್‌ಗಳು, ನಾಲ್ಕು ಖಾಲಿ ಪಿಸ್ತೂಲ್ ಕಾರ್ಟ್ರಿಜ್ಗಳು ಮತ್ತು 15 ಸಕ್ರಿಯ ಕಾರ್ಟ್ರಿಜ್ಗಳು ಅವರೊಂದಿಗೆ ಉಳಿಸಿಕೊಳ್ಳಲಾಗಿತ್ತು. ನಂತರ ಘರ್ಷಣೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿಸಿ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡಿದ್ದರು. ರಾಜೌರಿಯಲ್ಲಿ ಯುವಕರ ಹತ್ಯೆ ವಿರುದ್ಧ ತೀವ್ರ ಪ್ರತಿಭಟನೆಯೂ ನಡೆದಿತ್ತು.

Join Whatsapp