ಪ್ರಶಸ್ತಿಗಳನ್ನು ಹಿಂದಿರುಗಿಸಲು ತೆರಳುತ್ತಿದ್ದ ಅಥ್ಲೀಟ್ ಗಳನ್ನು ತಡೆದ ಪೊಲೀಸರು

Prasthutha|

ನವದೆಹಲಿ: ನೂತನ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ, ತಮಗೆ ದೊರೆತ 35 ರಾಷ್ಟ್ರೀಯ ಪ್ರಶಸ್ತಿಗಳನ್ನು ಮರಳಿಸಲು ರಾಷ್ಟ್ರಪತಿ ಭವನಕ್ಕೆ ತೆರಳುತ್ತಿದ್ದ ಪಂಜಾಬ್ ನ ಮಾಜಿ ಕುಸ್ತಿಪಟು ಕರ್ತಾರ್ ಸಿಂಗ್ ಹಾಗೂ ಕೆಲವು ಅಥ್ಲೀಟ್ ಗಳನ್ನು ಪೊಲೀಸರು ರಸ್ತೆಮಧ್ಯೆಯೇ ತಡೆದಿದ್ದಾರೆ.

- Advertisement -

“ರೈತರು ಯಾವಾಗಲೂ ನಮಗೆ ಬೆಂಬಲ ನೀಡಿದ್ದಾರೆ. ನಮ್ಮ ರೈತ ಸಹೋದರರ ಮೇಲೆ ಲಾಠಿ ಚಾರ್ಜ್ ನಡೆಸಿ, ರಸ್ತೆಗಳನ್ನು ಬಂದ್ ಮಾಡಿಸುವಂತಹ ಕ್ರಮಗಳನ್ನು ತೆಗೆದುಕೊಂಡಾಗ ಖೇದವೆನಿಸುತ್ತದೆ. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಅವರು ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ’ ಎಂದು ಎರಡು ಬಾರಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ಮಾಜಿ ಕುಸ್ತಿಪಟು ಕರ್ತಾರ್ ಸಿಂಗ್ ಹೇಳಿದ್ದಾರೆ.

“ನಾನು ಒಬ್ಬ ರೈತನ ಮಗ. ಐಜಿ, ಪೊಲೀಸ್ ಹುದ್ದೆಯಲ್ಲಿದ್ದರೂ ಈಗಲೂ ವ್ಯವಸಾಯ ಮಾಡುತ್ತೇನೆ’ ಎಂದು ಅವರು ಹೇಳಿದರು.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್ ಒಲಿಂಪಿಕ್ ಸಂಸ್ಥೆ(ಐಒಎ), “ಸರ್ಕಾರದ ಮೇಲೆ ನಂಬಿಕೆ ಇಡಿ. ರಾಷ್ಟ್ರೀಯ ಪುರಸ್ಕಾರ ಹಾಗೂ ಪ್ರತಿಭಟನೆ ಎರಡು ಭಿನ್ನ ಸಂಗತಿಗಳು” ಎಂದು ಹೇಳಿದೆ.

Join Whatsapp