ಪ್ರಧಾನಿ ಮೋದಿ ಭಾರತದ “ಮುಖ್ಯ ವಿನಾಶ ಪುರುಷ” | ರಾಮಚಂದ್ರ ಗುಹಾ

Prasthutha|

ಪ್ರಧಾನಿ ಮೋದಿ ಭಾರತದ “ಮುಖ್ಯ ವಿನಾಶ ಪುರುಷ” ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.

- Advertisement -

ಶನಿವಾರ “ರಿಕ್ಲೇಮಿಂಗ್ ಇಂಡಿಯಾ” ಹೆಸರಿನಲ್ಲಿ ನಡೆದ ವರ್ಚುವಲ್ ಕಾನ್ಫರೆನ್ಸ್ ವೊಂದರಲ್ಲಿ ಮಾತನಾಡಿದ ಅವರು, ಮೋದಿ ಸರಕಾರವು ಮೊದಲಿನಿಂದಲೂ ಭಾರತದ ಸೂಕ್ಷ್ಮ ಸಾಮಾಜಿಕ ಚೌಕಟ್ಟನ್ನು ಮತ್ತಷ್ಟು ಛಿನ್ನಗೊಳಿಸುವ ಕೆಲಸವನ್ನು ಮಾಡಿದೆ ಎಂದು ಹೇಳಿದರು. ಮಾತ್ರವಲ್ಲ, ನಾಲ್ದೆಸೆಗಳಿಂದಲೂ ನಡೆಯುತ್ತಿರುವ ಭಾರತದ ವಿನಾಶಕ್ಕಾಗಿ ಅವರು ಪ್ರಧಾನಿ ಮೋದಿಯವರನ್ನು ಹೊಣೆಯಾಗಿಸಿದ್ದಾರೆ.

ಗುಹಾರವರ ಪ್ರಕಾರ, “ಮೋದಿಯವರ ಆಡಳಿತಾವಧಿಯಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ವಿಶೇಷವಾಗಿ ಮುಸ್ಲಿಮರ ವಿರುದ್ಧ ಭಾರೀ ಪ್ರಮಾಣದ ತಾರತಮ್ಯದ ಧೋರಣೆಗಳಲ್ಲಿ ತೀವ್ರವಾಗಿ ಹೆಚ್ಚಳವಾಗಿವೆ. ಕಾಶ್ಮೀರಿಗರ ಮೇಲೆ ದೌರ್ಜನ್ಯವು ನಿರಂತರವಾಗಿದೆ ಮತ್ತು ವಿಧಿ 370ನ್ನು ರದ್ದಪಡಿಸುವ ಮೂಲಕ, ಮೋದಿಯವರ ಭಾರತದಲ್ಲಿ ಮುಸ್ಲಿಮ್ ಬಾಹುಳ್ಯ ರಾಜ್ಯದ ಪರಿಕಲ್ಪನೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಲಾಗಿತ್ತು.

- Advertisement -

ಮೋದಿ ಸರಕಾರದ ಮಾರಕ ಆರ್ಥಿಕ ನೀತಿಗಳಿಂದಾಗಿ 30 ವರ್ಷಗಳ ಆರ್ಥಿಕಾಭಿವೃದ್ಧಿಯೂ ನಾಶವಾಗಿಬಿಟ್ಟಿದೆ ಎಂದು ಹೇಳಿದ ರಾಮಚಂದ್ರ ಗುಹಾ, ಭಾರತಕ್ಕೆ ಇಂದು ಕೇವಲ ರಾಜಕೀಯ ವಿಪಕ್ಷದ ಅಗತ್ಯವಿರುವುದಲ್ಲ, ಜೊತೆಗೆ ಅದಕ್ಕೊಂದು ನೈತಿಕ, ಬೌದ್ಧಿಕ ಮತ್ತು ಸೈದ್ಧಾಂತಿಕ ವಿಪಕ್ಷದ ಅಗತ್ಯವೂ ಇದೆ ಎಂದು ಹೇಳಿದರು.

Join Whatsapp