ಪ್ರತಿಭಟನಾನಿರತ ರೈತರಿಗೆ ಉಚಿತ ಅಡುಗೆಯ ಸೇವೆ ನೀಡಿದ ಮುಸ್ಲಿಂ ಫೆಡರೇಶನ್ ತಂಡ

Prasthutha|

ನವದೆಹಲಿ: 25 ಮುಸ್ಲಿಂ ಪುರುಷರನ್ನೊಳಗೊಂಡ ತಂಡವೊಂದು ದಿಲ್ಲಿಯ ಸಿಂಘೂ ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ 24/7 ಉಚಿತ ಅಡುಗೆಯ ಸೇವೆ ನೀಡುತ್ತಿದೆ.

- Advertisement -

ಫಾರೂಕಿ ಮುಬೀನ್ ನೇತೃತ್ವದ ಪಂಜಾಬ್ ನ ಮುಸ್ಲಿಂ ಫೆಡರೇಶನ್ ತಂಡದ ಸದಸ್ಯರು, “ಎಲ್ಲರಿಗೂ ಅನ್ನ ನೀಡುವ ರೈತರಿಗೆ ಸೇವೆ ಸಲ್ಲಿಸಲು” ಸಿಂಘೂ ಗಡಿಗೆ ಬಂದಿರುವುದಾಗಿ ಹೇಳಿದ್ದಾರೆ.

“ರೈತರನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮದು 25 ಸ್ವಯಂಸೇವಕರನ್ನು ಒಳಗೊಂಡ ತಂಡವಾಗಿದ್ದು, ಈ ಸೇವೆಯನ್ನು ಮುಂದುವರಿಸಲು ನಮ್ಮ ತಂಡದ ಸದಸ್ಯರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಮುಬೀನ್ ಹೇಳಿದ್ದಾರೆ.

- Advertisement -

ನೂತನ ಕೃಷಿ ಕಾನೂನುಗಳನ್ನು ಶೀಘ್ರವಾಗಿ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ದಿಲ್ಲಿಯ ಇತರ ರಸ್ತೆಗಳನ್ನೂ ನಿರ್ಬಂಧಿಸುವುದಾಗಿ ಪ್ರತಿಭಟನಾನಿರತ ರೈತರು ಹೇಳಿದ್ದಾರೆ.

Join Whatsapp