ಪೂರ್ವಾಗ್ರಹಪೀಡಿತ ಮಾಧ್ಯಮಗಳ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಅಭಿಯಾನ

Prasthutha|

ಪ್ರವಾದಿ ಮುಹಮ್ಮದರ ಕುರಿತು ಹಾಕಿದ ಪ್ರಚೋದನಾಕಾರಿ ಪೋಸ್ಟ್ ಮತ್ತು ಆ ನಂತರ ಭುಗಿಲೆದ್ದ ಜನಾಕ್ರೋಶ, ಹಿಂಸಾಚಾರದ ಘಟನೆ‌ ನಡೆದು ವಾರ ಕಳೆದರೂ ಕನ್ನಡ ಮಾಧ್ಯಮಗಳು ಘಟನೆಯ ಕುರಿತಾದ ವರದಿಗಳನ್ನು ವರ್ಣರಂಜಿತವಾಗಿ ಪ್ರಕಟಿಸುತ್ತಿವೆ. ಟಿ.ಆರ್.ಪಿ. ಗಾಗಿ ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುತ್ತಿರುವ ಮಾಧ್ಯಮಗಳ ನಡೆಯ ವಿರುದ್ಧ ಆಕ್ರೋಶಗೊಂಡಿರುವ ಕನ್ನಡಿಗರು #KannadaMediaStopConspiracy ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ದ್ವೇಷ ತುಂಬಿದ ಮಾಧ್ಯಮಗಳನ್ನು ತಡೆಯೋಣ ಎಂಬ ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿದ್ದಾರೆ.

- Advertisement -

 ಸಂಜೆ 7 ಗಂಟೆಗೆ ಪ್ರಾರಂಭವಾದ ಈ ಟ್ವಿಟ್ಟರ್ ಅಭಿಯಾನವು ರಾತ್ರಿ 10ರ ವೇಳೆಗೆ 9 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳೊಂದಿಗೆ ಟ್ವಿಟ್ಟರ್ ಟ್ರೆಂಡಿಂಗ್  ನಲ್ಲಿ ನಂಬರ್ 1 ಸ್ಥಾನ ಪಡೆದಿದ್ದು, ಬೆಳಗ್ಗಿನ ವರೆಗೂ ಇದು ಯಥಾ ಸ್ಥಾನವನ್ನು ಕಾಪಾಡಿಕೊಂಡಿತ್ತು.

“ಸಮುದಾಯಗಳ ನಡುವಿನ ಸಾಮರಸ್ಯವನ್ನು ಕಾಪಾಡುವುದು ಮತ್ತು ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ಪುನಃಸ್ಥಾಪಿಸುವುದು ಮಾಧ್ಯಮಗಳ ಜವಾಬ್ದಾರಿ.  ಆದರೆ ಕನ್ನಡ ಮಾಧ್ಯಮಗಳು ಅನುಕರಿಸುತ್ತಿರುವ ಹಾದಿಯು ಶಾಂತಿಯುತ ಸಮಾಜದ ಉಳಿವಿಗೆ ವಿನಾಶಕಾರಿಯಾಗಿದೆ” ಎಂದು ಟ್ವೀಟ್ ಮಾಡಲಾಗಿದೆ.

- Advertisement -

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕಾದ ಮಾಧ್ಯಮಗಳು ಟಿ.ಆರ್.ಪಿ. ತೆವಳಿಗಾಗಿ ಕಪೋಲಕಲ್ಪಿತ ಸುದ್ದಿಗಳನ್ನೇ ಬಂಡವಾಳವಾಗಿಸಿವೆ ಎಂದು ಟ್ವಿಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಾನೂನು ವ್ಯವಸ್ಥೆಗೆ ಸವಾಲೆಸೆದು ದಿಲ್ಲಿ ಹಿಂಸಾಚಾರಕ್ಕೆ ಕಾರಣಕರ್ತನಾದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಬೆಂಗಳೂರಿನಲ್ಲಿ ಶಾಂತಿಗೆ ಕರೆ ನೀಡಿದ ಮುಝಮ್ಮಿಲ್ ಪಾಶಾರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ತಾರತಮ್ಯದ‌ ಕುರಿತು ಮಾಧ್ಯಮಗಳು ಏಕೆ ಪ್ರಶ್ನಿಸುತ್ತಿಲ್ಲ ಎಂದು ಟ್ಟಿಟ್ಟಿಗರು ಪ್ರಶ್ನಿಸಿರುವುದು ಗಮನಾರ್ಹವಾಗಿದೆ.



Join Whatsapp