ನೈಜಿರಿಯಾ ಪ್ರಕ್ಷುಬ್ಧ | ನಾಗರಿಕರ ಪ್ರತಿಭಟನೆ | ಹಿಂಸಾಚಾರಕ್ಕೆ 51 ಬಲಿ, 18 ಭದ್ರತಾ ಸಿಬ್ಬಂದಿ ಸಾವು

Prasthutha|

ಅಬುಜಾ : ಪೊಲೀಸ್ ದೌರ್ಜನ್ಯ ಖಂಡಿಸಿ ನೈಜೀರಿಯಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ 51 ಮಂದಿ ನಾಗರಿಕರು ಬಲಿಯಾಗಿದ್ದಾರೆ ಮತ್ತು 18 ಮಂದಿ ಭದ್ರತಾ ಸಿಬ್ಬಂದಿ ಮಡಿದಿದ್ದಾರೆ. ನೈಜಿರಿಯಾದ ಅತಿದೊಡ್ಡ ನಗರ ಲಾಗೊಸ್ ನಲ್ಲಿ ಯೋಧರನ್ನು ನಿಯೋಜಿಸಲಾಗಿದೆ, ಕರ್ಫ್ಯೂ ವಿಧಿಸಲಾಗಿದೆ.

- Advertisement -

ದೊಡ್ಡ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ಮಂಗಳವಾರ ರಾಷ್ಟ್ರಗೀತೆ ಹಾಡುತ್ತಿದ್ದಾಗಲೇ, ಯೋಧರು ಗುಂಡಿಕ್ಕಿ 12 ಪ್ರತಿಭಟನಕಾರರನ್ನು ಹತ್ಯೆ ಮಾಡಿದ್ದಾರೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ವರದಿ ಮಾಡಿದೆ.

ಘಟನೆಯಲ್ಲಿ 11 ಮಂದಿ ಪೊಲೀಸರು, ಏಳು ಮಂದಿ ಸೈನಿಕರನ್ನು ಗಲಭೆಕೋರರು ಹತ್ಯೆ ಮಾಡಿದ್ದಾರೆ ಎಂದು ನೈಜೀರಿಯಾ ಅಧ್ಯಕ್ಷ ಮುಹಮ್ಮದು ಬುಹಾರಿ ಹೇಳಿದ್ದಾರೆ. ಘಟನೆಯಲ್ಲಿ 37 ಮಂದಿಗೆ ಗಾಯಗಳಾಗಿವೆ ಎಂದೂ ಅವರು ತಿಳಿಸಿದ್ದಾರೆ.

- Advertisement -

ಅಂತಾರಾಷ್ಟ್ರೀಯ ಸುದ್ದಿಯಾಗಿರುವ ಪ್ರತಿಭಟನಕಾರರ ಹತ್ಯೆ ಕುರಿತು ಬುಹಾರಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಹಾಳುಮಾಡಲು ವಿಧ್ವಂಸಕ ಶಕ್ತಿಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿವೆ ಎಂದು ಪ್ರತಿಭಟನಕಾರರನ್ನು ಎಚ್ಚರಿಸಿದ್ದಾರೆ. ವಿಶೇಷ ದರೋಡೆ ತಡೆ ದಳವನ್ನು ರದ್ದುಪಡಿಸುವಂತೆ ನೈಜಿರಿಯಾ ಸರಕಾರವನ್ನು ಒತ್ತಾಯಿಸಿ, ಈ ತಿಂಗಳ ಆರಂಭದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಈ ದಳವನ್ನು ರಚಿಸಲಾಗಿದೆ, ಆದರೆ, ಇದು ನಾಗರಿಕರಿಗೆ ಹಿಂಸೆ ನೀಡುವ ಮತ್ತು ಹತ್ಯೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ವರದಿ ಮಾಡಿದೆ.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/



Join Whatsapp