ಕಟ್ಮಂಡು: ನೇಪಾಳದಲ್ಲಿ ಬುಧವಾರ ಬೆಳಿಗ್ಗೆ ತೀವ್ರ ಭೂಕಂಪನ ಸಂಭವಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನೇಪಾಳದ ದೋಟಿ ಜಿಲ್ಲೆಯಲ್ಲಿ ಭೂಕಂಪದಿಂದ ಮನೆ ಕುಸಿದು ಆರು ಜನರು ಸಾವನ್ನಪ್ಪಿದ್ದಾರೆ. ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (EMSC) ಈ ಹಿಂದೆ ಭೂಕಂಪವನ್ನು 5.6 ತೀವ್ರತೆಯಲ್ಲಿ ಅಂದಾಜಿಸಿತ್ತು. ಈ ಬಾರಿ 6.6 ತೀವ್ರತೆಯಲ್ಲಿ ಭೂಕಂಪ ನಡೆದಿದೆ.
ಉತ್ತರ ಪ್ರದೇಶದ ಪಿಲಿಭಿಟ್ ನಗರದಿಂದ ಈಶಾನ್ಯಕ್ಕೆ 158 ಕಿ.ಮೀ (98 ಮೈಲಿ) ದೂರದಲ್ಲಿ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಇಎಂಎಸ್ಸಿ ತಿಳಿಸಿದೆ.
ಭೂಕಂಪನದ ನಂತರ ಭಾರತದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.