ನಾಳೆ ಮಂಗಳೂರಿನ ಪುರಭವನದಲ್ಲಿ SDPI ಜಿಲ್ಲಾ ಪ್ರತಿನಿಧಿ ಸಭೆ, ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಸಭೆ ಹಾಗೂ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭವು ಜನವರಿ 07 ಮಂಗಳವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

- Advertisement -

ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ ಎಂಟು ಅಸೆಂಬ್ಲಿ ಸಮಿತಿಯ ಸದಸ್ಯರು, ಅಸೆಂಬ್ಲಿ ಸಮಿತಿಯಿಂದ ಆಯ್ಕೆಯಾದ ಕೌನ್ಸಿಲರ್ ಗಳು, ವಿಶೇಷ ಆಹ್ವಾನಿತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತೀ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಪ್ರತಿನಿಧಿ ಸಭೆಯಲ್ಲೇ ಮುಂದಿನ ಅವಧಿಯ ನಾಯಕತ್ವದ ಆಯ್ಕೆ ನಡೆಯಲಿದೆ ಎಂದು SDPI ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರತಿನಿಧಿ ಸಭೆಗೆ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಹಾಗೂ ರಾಜ್ಯ ಸಮಿತಿಯ ಇತರ ನಾಯಕರು ವೀಕ್ಷಕರಾಗಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಷ್ಟ್ರೀಯ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ, ಅಲ್ಫೋನ್ಸೋ ಫ್ರಾಂಕೋ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಪ್ರತಿನಿಧಿ ಸಭೆಯ ಬಳಿಕ ಸಾಯಂಕಾಲ ಏಳು ಘಂಟೆಗೆ ನೂತನ ಜಿಲ್ಲಾ ನಾಯಕರ ಘೋಷಣೆ ಹಾಗೂ ಪದಗ್ರಹಣ ಸಮಾರಂಭವು ನಡೆಯಲಿದೆ, ಏಳು ಘಂಟೆಗೆ ನಡೆಯುವ ಪದಗ್ರಹಣ ಸಮಾರಂಭಕ್ಕೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಪದಗ್ರಹಣ ಸಮಾರಂಭವನ್ನು ಯಶಸ್ವಿ ಗೊಳಿಸಬೇಕೆಂದು ಸುಹೈಲ್ ಖಾನ್ ಆಗ್ರಹಿಸಿದ್ದಾರೆ.Show less



Join Whatsapp