ನಾನು ಮನಸು ಮಾಡಿದರೆ ಜನಾರ್ದನ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸಬಲ್ಲೆ: ಶಿವರಾಜ್ ತಂಗಡಗಿ

Prasthutha|

ಕೊಪ್ಪಳ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ್​ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ರೆಡ್ಡಿಯ ‘ಕಂತ್ರಿ’ ಹೇಳಿಕೆಗೆ ತಿರುಗೇಟು‌ ನೀಡಿದ ಶಿವರಾಜ್ ತಂಗಡಗಿ, ನಾನು ಮನಸ್ಸು ಮಾಡಿದರೆ ರೆಡ್ಡಿ ಇತಿಹಾಸ ಬಿಚ್ಚಿಡುತ್ತೇನೆ. ನನ್ನ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ಮಾತನಾಡಿದರೆ ನಿಮ್ಮನ್ನು ಎಲ್ಲಿ ಬೇಕಾದರೂ ಬೆತ್ತಲೆಯಾಗಿ ನಿಲ್ಲಿಸುವೆ ಎಂದು ಹೇಳಿದ್ದಾರೆ.

- Advertisement -

ಇತ್ತಿಚಿಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ವೇಳೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನರೇಂದ್ರ ಮೋದಿ ಹೆಸರು ಹೇಳುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವ ಸಚಿವ ಶಿವರಾಜ ತಂಗಡಗಿಯನ್ನು ಮಂತ್ರಿ ಎನ್ನಬೇಕೊ, ಕಂತ್ರಿ ಎನ್ನಬೇಕೋ ಎಂದು ಪ್ರಶ್ನಿಸಿದ್ದರು.

ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ಆಡಳಿತ ಮತ್ತು ವಿಪಕ್ಷದವರ ನಡುವೆ ಮಾತಿನ ಚಕಮಕಿಗೆ ಕಾರಣಾವಾಗಿತ್ತು.

Join Whatsapp