ನಮ್ಮ ಕೋವಿಡ್ ಲಸಿಕೆಗಳಲ್ಲಿ ವಿಶ್ವಾಸವಿಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ : ಬಿಜೆಪಿ ಶಾಸಕ

Prasthutha|

- Advertisement -

ಲಕ್ನೋ: ದೇಶ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಗಳಲ್ಲಿ ವಿಶ್ವಾಸವಿಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕೆಂದು ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರಪ್ರದೇಶದ ಸರ್ದಾನದ ಶಾಸಕ ಸಂಗೀತಾ ಸಿಂಗ್ ಸೋಮ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋಮುದ್ವೇಷದ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಬಿಜೆಪಿ ನಾಯಕ, ದೇಶದ ವಿಜ್ಞಾನಿಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸವಿಲ್ಲದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿಕೆ ನೀಡಿದ್ದಾರೆ.

“ಕೆಲವು ಮುಸ್ಲಿಮರಿಗೆ ನಮ್ಮ ದೇಶ, ನಮ್ಮ ವಿಜ್ಞಾನಿಗಳು, ನಮ್ಮ ಪೊಲೀಸ್ ಪಡೆ ಮತ್ತು ಪ್ರಧಾನಿ ಮೋದಿಯವರ ವಿಸ್ವಾಸವಿಲ್ಲದಿರುವುದು ದುರದೃಷ್ಟಕರ. ಅವರ ಆತ್ಮ ಪಾಕಿಸ್ಥಾನದ್ದಾಗಿದೆ. ಅವರು ಪಾಕಿಸ್ತಾನಕ್ಕೆ ಹೋಗಬೇಕು. ಅವರು ನಮ್ಮ ವಿಜ್ಞಾನಿಗಳ ಸೇವೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದು ”ಎಂದು ಸಂಗೀತಾ ಸಿಂಗ್ ಸೋಮ್ ಹೇಳಿದ್ದಾರೆ.

- Advertisement -

ಕೋವಿಡ್ ಲಸಿಕೆಗಳಲ್ಲಿ ಹಂದಿಮಾಂಸವನ್ನು ಬಳಸಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಇದು ಸುಳ್ಳು ಪ್ರಚಾರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.



Join Whatsapp