“ಧರ್ಮವು ನಿರ್ಭೀತಿಯಾಗಿದೆ ಜಾತ್ಯತೀತತೆಯು ನಮ್ಮ ಹೆಮ್ಮೆಯಾಗಿದೆ” ಸಮ್ಮೇಳನದ ಪ್ರಚಾರ ಸಮಾರೋಪ ಸಮಾರಂಭ

Prasthutha|

ನಮ್ಮ ಮಾತೃ ಸಂಘಟನೆಯಾದ ಕೇರಳ ನದ್ವತುಲ್ ಮುಜಾಹಿದೀನ್ (ಕೆ.ಎನ್.ಎಂ) ಎಂಬುದು ಒಂದು ಶತಮಾನಕ್ಕಿಂತಲೂ ಹೆಚ್ಚು ಸುದೀರ್ಘ ಕಾಲದಿಂದ ಮುಸ್ಲಿಂ ಸಮಾಜದಲ್ಲಿ ಬೇರು ಬಿಟ್ಟಿರುವ ಮೂಡನಂಬಿಕೆ, ಅಂಧವಿಶ್ವಾಸ, ಅನಾಚಾರಗಳ ನಿರ್ಮೂಲನ ವಿವಿಧ ಧರ್ಮೀಯರ ಮಧ್ಯೆ ಸಹಿಷ್ಣುತೆ, ಸೌಹಾರ್ಧತೆ ಸ್ಥಾಪನೆ ಮುಂತಾದ ಸಮಾಜ ಸುಧಾರಣಾ ಕಾರ್ಯದಲ್ಲಿ ಅವಿಶ್ರಾಂತವಾಗಿ ದುಡಿಯುತ್ತಾ ನಾಡಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ ಒಂದು ನವೋದಯ ಸಂಘಟನೆಯಾಗಿದೆ. ಈ ಸಂಘಟನೆ ಪ್ರತೀ 5 ವರ್ಷಕ್ಕೊಮ್ಮೆ ಮುಜಾಹಿದ್ ಸಮ್ಮೇಳನ ಎಂಬ ಹೆಸರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. ಇದೀಗ 10 ನೇ ಕೇರಳ ರಾಜ್ಯ ಸಮ್ಮೇಳನವು ಇದೇ ಬರುವ ಡಿ. 29, 30, 31 ಹಾಗೂ ಜ.01 ಈ ನಾಲ್ಕು ದಿನಗಳಲ್ಲಿ ಕ್ಯಾಲಿಕೆಟ್’ನಲ್ಲಿ ನಡೆಯಲಿದೆ. ದೇಶ ವಿದೇಶಗಳ ಅಗ್ರಗಣ್ಯ ಧಾರ್ಮಿಕ ನೇತಾರರು, ದಾರ್ಶನಿಕರು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಮುಖ ಸಚಿವರು, ಸಂಸದರು, ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆಯಿದೆ.

- Advertisement -

                “ಧರ್ಮವು ನಿರ್ಭೀತಿಯಾಗಿದೆ ಜಾತ್ಯತೀತತೆಯು ನಮ್ಮ ಹೆಮ್ಮೆಯಾಗಿದೆ” ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಮಹತ್ವಪೂರ್ಣ ಸಮ್ಮೇಳನದ ಪ್ರಚಾರಾರ್ಥ ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೌತ್ ಕರ್ನಾಟಕ ಸಲಫಿ ಮೂವ್’ಮೆಂಟ್ ಧಾರ್ಮಿಕ ಸಮಾವೇಶ ನಡೆಸಿತ್ತು. ಇದರ ಸಮಾರೋಪ ಸಮಾರಂಭವು ನಾಳೆ ಡಿ. 25 ನೇ ಆದಿತ್ಯವಾರ ಪುರಭವನದಲ್ಲಿ ನಡೆಯಲಿದೆ. ಮಧ್ಯಾಹ್ನ ಗಂಟೆ 2:30 ರಿಂದ 4ರವರೆಗೆ ಮಹಿಳಾ ಸಮಾವೇಶ, ಸಂಜೆ 4:30 ರಿಂದ 9:30ರವರೆಗೆ ಧಾರ್ಮಿಕ ಸಮಾವೇಶವನ್ನು ಹಮ್ಮಿಕೊಂಡಿದೆ. ಮಹಿಳಾ ಸಮಾವೇಶದಲ್ಲಿ ಸಹೋದರಿ ಆಯಿಶಾ ಮತ್ತು ಸಹೋದರಿ ಮುಝಾಹಿದಾ ಪ್ರವಚನ ನೀಡಲಿದ್ದಾರೆ. ಸಂಜೆ 4:30ಕ್ಕೆ ಎಸ್.ಕೆ.ಎಸ್.ಎಂ. ನ ಕೇಂದ್ರ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್’ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕೆ.ಎನ್.ಎಂ. ಉಪಾಧ್ಯಕ್ಷ ಡಾI ಹುಸೈನ್ ಮಡವೂರ್, ಮೌಲವಿ ಹನೀಫ್ ಕಾಯಕೋಡಿ, ಶೇಖ್ ಅಬ್ದುಲ್ ವಹ್ಹಾಬ್ ಜಾಮಈ, ಮೌಲವಿ ಅಬ್ದುಲ ರಹ್ಮಾನ್ ಪಾಲತ್, ಮೌಲವಿ ಅಬ್ದುಶುಕೂರ್ ಸ್ವಲಾಹಿ, ಮೌಲವಿ ಸಅದುದ್ದೀನ್ ಸ್ವಲಾಹಿ, ಮೌಲವಿ ಮುಸ್ತಫಾ ದಾರಿಮಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಎಸ್.ಕೆ.ಎಸ್.ಎಂ. ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp