ದೆಹಲಿ ಚಲೋ ಆಂದೋಲನ| ಅಂಬಾಲಾದಿಂದ ದೆಹಲಿಗೆ ರೈತರಿಂದ ಪ್ರತಿಭಟನಾ ಮೆರವಣಿಗೆ

Prasthutha|

ಹರಿಯಾಣದ ಅಂಬಾಲಾ ಜಿಲ್ಲೆಯ ಸಾವಿರಾರು ರೈತರು ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಬುಧವಾರ ದೆಹಲಿಯತ್ತ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ.

- Advertisement -

“ದೆಹಲಿ ಚಲೋ’’ ಮೆರವಣಿಗೆಯ ಭಾಗವಾಗಿ, ಹರಿಯಾಣ ಪೊಲೀಸರು ರೈತರು ರಾಷ್ಟ್ರೀಯ ರಾಜಧಾನಿಯನ್ನು ತಲುಪದಂತೆ ತಡೆಯಲು ಹೆದ್ದಾರಿಗಳಲ್ಲಿ ರಸ್ತೆ ಬ್ಯಾರಿಕೇಡ್‌ಗಳು ಮತ್ತು ತಿರುವುಗಳನ್ನು ಸ್ಥಾಪಿಸಿದರೂ ಅವರು ಧೈರ್ಯಗುಂದದೆ ಮೆರವಣಿಗೆ ನಡೆಸಿದ್ದಾರೆ.

ಮಧ್ಯಾಹ್ನ ಅಂಬಾಲಾ ಬಳಿಯ ಆಹಾರ ಧಾನ್ಯಗಳ ಮಾರುಕಟ್ಟೆಯಿಂದ ರೈತರು ಟ್ರಾಕ್ಟರುಗಳು ಮತ್ತು ಟ್ರಾಲಿಗಳಲ್ಲಿ ದೆಹಲಿ ಕಡೆಗೆ ಮೆರವಣಿಗೆ ಪ್ರಾರಂಭಿಸಿದರು. ಪೊಲೀಸರು ಹಾಕಿದ್ದ ಅಡೆತಡೆಗಳನ್ನು ಮುರಿದು ರೈತರು ದೆಹಲಿಗೆ ಪ್ರವೇಶಿಸುವ ಮುನ್ನ ಮಧ್ಯರಾತ್ರಿ ಸುಮಾರಿಗೆ ಸೋನಿಪತ್‌ನ ರಾಜೀವ್ ಗಾಂಧಿ ಶಿಕ್ಷಣ ನಗರವನ್ನು ತಲುಪಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸದಸ್ಯ ಬಾಲ್ಕರ್ ಸಿಂಗ್ ಪತ್ರಿಕೆಗೆ ತಿಳಿಸಿದ್ದಾರೆ.

- Advertisement -

ಪಂಜಾಬ್‌ನೊಂದಿಗಿನ ರಾಜ್ಯ ಗಡಿಗಳನ್ನು ನವೆಂಬರ್ 26 ಮತ್ತು 27 ರಂದು ಮೊಹರು ಮಾಡಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಕೊರೊನಾ ಬಿಕ್ಕಟ್ಟಿನಲ್ಲಿ ಯಾವುದೇ ಸಭೆಗಾಗಿ ನಗರಕ್ಕೆ ಬಂದರೆ ರೈತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಂಗಳವಾರ ಎಚ್ಚರಿಕೆ ನೀಡಿದ್ದರು.

Join Whatsapp