ದೆಹಲಿ ಗಲಭೆ | ‘ಹಿಂದೂ’ ಆರೋಪಿಗಳ ವಿರುದ್ಧ ಮೃದು ಧೋರಣೆಗೆ ನಿರ್ದೇಶನ | ನಿವೃತ್ತ ಐಪಿಎಸ್ ಅಧಿಕಾರಿಗಳ ಆಕ್ಷೇಪ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಕೋಮುಗಲಭೆಗೆ ಸಂಬಂಧಿಸಿದ ಹಿಂದೂ ಆರೋಪಿಗಳ ವಿರುದ್ಧ ಮೃದು ಧೋರಣೆ ತಾಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪೊಲೀಸ್ ಇಲಾಖೆಯ ಈ ನಡೆಯ ಬಗ್ಗೆ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗಳಿಗೆ ಇಂತಹ ನಿರ್ದೇಶನ ನೀಡುವುದು ಕಾನೂನಿನ ಸಂಪ್ರದಾಯ ನಿಯಮಗಳಿಗೆ ವಿರುದ್ಧವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -

“ಯಾವುದೇ ಅಧಿಕಾರಿಗೆ ನಿರ್ದೇಶನಗಳು ಸಹಜ, ಆದರೆ ನಿರ್ದಿಷ್ಟ ಜಾತಿ, ಸಮುದಾಯಕ್ಕೆ ಸಂಬಂಧಿಸಿ ಸರಿಯಲ್ಲ. ಸಮಾನವಾಗಿ ಕಾನೂನು ನಿಯಮಗಳನ್ನು ಜಾರಿಗೊಳಿಸುವುದು ನಮ್ಮ ಸಂವಿಧಾನದ ಹಿರಿಮೆ. ಇದು ಸಮಾನತೆಯ ಕಾನೂನು ಮತ್ತು ಕಾನೂನು ಮತ್ತು ಪ್ರಕ್ರಿಯೆಗಳು ಸಮಾನಾಂತರವಾಗಿ ಜಾರಿಗೊಳ್ಳಬೇಕು. ಹಿಂದೂ ಮತ್ತು ಹಿಂದೂಯೇತರರಿಗೆ ಭಿನ್ನವಾದ ವ್ಯವಹಾರಗಳನ್ನು ನಡೆಸುವಂತಿಲ್ಲ’’ ಎಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಹೇಳಿದ್ದಾರೆ.

ದೆಹಲಿಯ ಮಾಜಿ ಪೊಲೀಸ್ ಕಮೀಶನರ್ ಒಬ್ಬರು ಕೂಡ ಇಲಾಖೆಯ ನಡೆಯನ್ನು ವಿರೋಧಿಸಿದ್ದಾರೆ. ಈ ರೀತಿಯ ನಿರ್ದೇಶನಗಳನ್ನು ನೀಡುವಾಗ, ಹಿಂದೂ ಅಥವಾ ಮುಸ್ಲಿಂ ಎಂದು ಸೂಚಿಸುವುದು ಸರಿಯಲ್ಲ ಎಂದಿದ್ದಾರೆ.  

- Advertisement -

ಇಂತಹ ನಿರ್ದೇಶನ ನೀಡಿರುವ ಬಗ್ಗೆ ಮಾಹಿತಿಗಳು ಕಳೆದ ವಾರ ಬಹಿರಂಗಗೊಂಡಿತ್ತು. ಸುಮಾರು 53 ಮಂದಿಯ ಸಾವಿಗೆ ಕಾರಣವಾದ ದೆಹಲಿ ಗಲಭೆಯಲ್ಲಿ ಪೊಲೀಸರು ಪಕ್ಷಪಾತ ವಹಿಸಿದ್ದರು ಎಂಬ ಆರೋಪಗಳು ಈಗಾಗಲೇ ಇವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಸಂಚಿನ ಪರಿಣಾಮವಾಗಿ ಈ ಗಲಭೆ ನಡೆದಿದೆ ಎಂದು ಪ್ರತಿಪಾದಿಸಲಾಗಿತ್ತು. ಗಲಭೆಯಲ್ಲಿ 40ಕ್ಕೂ ಹೆಚ್ಚು ಮುಸ್ಲಿಮರ ಸಾವು ಸಂಭವಿಸಿದ್ದುದಲ್ಲದೆ, ಮುಸ್ಲಿಮರ ಅಪಾರ ಆಸ್ತಿಗಳಿಗೆ ಹಾನಿಯುಂಟಾಗಿ ನಷ್ಟವಾಗಿತ್ತು. ಗಲಭೆ ಆರಂಭವಾದಾಗ, ಗಲಭೆಕೋರರ ವಿರುದ್ಧ ಪೊಲೀಸರು ತುರ್ತು ಕ್ರಮ ಕೈಗೊಂಡಿರಲಿಲ್ಲ ಎಂಬ ಆಪಾದನೆಗಳಿವೆ.     

Join Whatsapp