ವಾಶಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಟ್ವಿಟ್ಟರ್ ಅಕೌಂಟ್ ಅನ್ನು ಶಾಶ್ವತವಾಗಿ ಅಮಾನತುಗೊಳಿಸುವ ನಿರ್ಣಯದ ನೇತೃತ್ವವನ್ನು ಭಾರತೀಯ ವಲಸಿಗರಾಗಿರುವ ಟ್ವಿಟ್ಟರ್ ನ 45ರ ಹರೆಯದ ವಕೀಲೆ ವಿಜಯಾ ಗಡ್ಡೆ ವಹಿಸಿದ್ದರು.
ಯುಎಸ್ ಕ್ಯಾಪಿಟೋಲ್ ನ ಗಲಭೆಕೋರರನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿ ಪೋಸ್ಟ್ ಮಾಡಿದ್ದರೆಂಬ ಕಾರಣಕ್ಕೆ ಶುಕ್ರವಾರದಂದು ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿತ್ತು.
“ಹೆಚ್ಚಿನ ಹಿಂಸೆಯ ಅಪಾಯವಿರುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ರ ಖಾತೆಯನ್ನು ಟ್ವಿಟ್ಟರ್ ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ನಾವು ನಮ್ಮ ನೀತಿ ಜಾರಿ ವಿಶ್ಲೇಷಣೆಯನ್ನೂ ಪ್ರಕಟಿಸಿದ್ದೇವೆ. ನಮ್ಮ ನಿರ್ಣಯದ ಕುರಿತು ನೀವು ಇಲ್ಲಿ ಇನ್ನಷ್ಟು ಓದಬಹುದು” ಎಂದು ಕಾನೂನು, ನೀತಿ, ನಂಬಿಕೆ ಮತ್ತು ಸುರಕ್ಷತಾ ವಿಷಯಗಳಿಗೆ ಸಂಬಧಿಸಿದ ಕಂಪೆನಿಯ ನಾಯಕಿ ವಿಜಯ ಗಡ್ಡೆ ಟ್ವಿಟ್ಟರ್ ನಲ್ಲಿ ಹೇಳಿದ್ದರು. ಭಾರತದಲ್ಲಿ ಜನಿಸಿದ ಗಡ್ಡೆ ಬಾಲ್ಯದಲ್ಲೇ ಅಮೆರಿಕಾಗೆ ತೆರಳಿದ್ದು ಟೆಕ್ಸಾಸ್ ನಲ್ಲಿ ಬೆಳೆದಿದ್ದರು. ಅವರ ತಂದೆ ಅಲ್ಲಿ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ತೈಲ ಸಂಸ್ಕರಣಾ ಘಟಕವೊಂದರಲ್ಲಿ ರಾಸಾಯನಿಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು