ಮೆಲ್ಬರ್ನ್: ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಆಸಿಸ್ 5ನೇ ಮತ್ತು ಅಂತಿಮ ಟೆಸ್ಟ್ ನ 2ನೇ ದಿನದಾಟದಲ್ಲಿ 181 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತ ತಂಡ ಅಲ್ಪ ಮೊತ್ತದ ಮುನ್ನಡೆ ಕಾಯ್ದುಕೊಂಡಿದೆ.
ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೀ ಸ್ಟ್ರೋಕ್‌ನಲ್ಲಿ ಭಾರತವು ಮೇಲುಗೈ ಸಾಧಿಸಲು ಸಹಾಯ ಮಾಡಿದರು.
ಪ್ರಥಮ ಇನಿಂಗ್ಸ್ ನಲ್ಲಿ ರಿಷಭ್ ಪಂತ್ ಅವರ 40 ರನ್ ಗಳ ಹಾಗೂ ಜಸ್ ಪ್ರೀತ್ ಬುಮ್ರಾ ಅವರ 22 ರನ್ ಗಳ ಕೊಡುಗೆಯೊಂದಿಗೆ ಭಾರತ ತಂಡವು 185 ರನ್ ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ಬ್ಯಾಟರ್ ಗಳ ಟೀಮ್ ಇಂಡಿಯಾ ಬೌಲರ್ ಗಳ ಕರಾರುವಾಕ್ ದಾಳಿ ಮುಂದೆ ರನ್ ಗಳಿಸಲು ಪರದಾಡಿದರು. ಪರಿಣಾಮ ಆಸೀಸ್ ಪಡೆ ತವರು ಮೈದಾನದಲ್ಲಿ ಕೇವಲ 181 ರನ್ಗಳಿಗೆ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.