ಇಂದು ನೇಪಾಳ, ಚೀನಾ, ಟಿಬೆಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದೆ. ಚೀನಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಒಂದು ಗಂಟೆಯಲ್ಲಿ ಟಿಬೆಟ್ ನಲ್ಲಿ ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯ ಪ್ರಬಲವಾದ ಭೂಕಂಪ ಸೇರಿ ಆರು ಭೂಕಂಪಗಳು ಸಂಭವಿಸಿದ್ದು, 30 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಟಿಬೆಟ್ ನ ಶಿಗಾಟ್ಸೆ ನಗರದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶ ಭಯಭೀತವಾಗಿದೆ.
ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನ್ ನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿವೆ. ಭೂಕಂಪದಲ್ಲಿ ಟಿಬೆಟಿಯನ್ ಪ್ರದೇಶದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.