ಟಿಆರ್‌ಪಿ ಹಗರಣವನ್ನು ಮಾಧ್ಯಮ ಪ್ರಹಸನವನ್ನಾಗಿಸುತ್ತಿರುವ ರಿಪಬ್ಲಿಕ್ ಟಿವಿ: ಸುಪ್ರೀಂಗೆ ಮುಂಬೈ ಪೊಲೀಸ್ ಅಫಿಡವಿಟ್

Prasthutha|

ನವದೆಹಲಿ : ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಪ್ರಥಮ ವರ್ತಮಾನ ವರದಿ(ಎಫ್ ಐಆರ್)ಯನ್ನು ಮಾಧ್ಯಮ ಪ್ರಹಸನವನ್ನಾಗಿಸುವ ಕಾರ್ಯದಲ್ಲಿ ರಿಪಬ್ಲಿಕ್ ಟಿವಿ ನಿರತವಾಗಿದೆ. ಸಂವಿಧಾನದ ವಿಧಿ 19(1)(a) ಅಡಿ ಪ್ರಾಪ್ತವಾಗಿರುವ ಹಕ್ಕುಗಳನ್ನು ಅಪರಾಧಗಳನ್ನು ಮುಚ್ಚಿಕೊಳ್ಳಲು ಬಳಸಲಾಗದು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಮುಂಬೈ ಪೊಲೀಸರು ಉಲ್ಲೇಖಿಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್‌ ನಲ್ಲಿ ರಿಪಬ್ಲಿಕ್ ಟಿವಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಕಾನೂನು ಪ್ರಕ್ರಿಯೆಯ ಉಲ್ಲಂಘನೆ ಎಂದಿರುವ ಮುಂಬೈ ಪೊಲೀಸರು, ಸೂಕ್ತ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ತಮ್ಮ ಚಾನೆಲ್ ವಿರುದ್ಧ ಮುಂಬೈ ಪೊಲೀಸರು ಜಾರಿಗೊಳಿಸಿರುವ ಸಮನ್ಸ್ ಪ್ರಶ್ನಿಸಿ ಟಿಪಬ್ಲಿಕ್ ಟಿವಿ ಮುಖ್ಯ ಹಣಕಾಸು ಅಧಿಕಾರಿ ಎಸ್. ಸುಂದರಂ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

- Advertisement -

ಎಫ್ ಐಆರ್ ನಲ್ಲಿ ಮಾಡಲಾಗಿರುವ ಆರೋಪಗಳ ಬಗ್ಗೆ ಈ ಹಂತದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲದೆ, ಪರಿಚ್ಛೇಧ 32ರನ್ವಯ ಕೋರ್ಟ್ ಮಧ್ಯಪ್ರವೇಶಿಸುವ ಯಾವುದೇ ಸಂದರ್ಭವೂ ಸೃಷ್ಟಿಯಾಗಿಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಹಲವು ಟಿವಿ ವಾಹಿನಿಗಳ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಎಲ್ಲರೂ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ಪೊಲೀಸರ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.



Join Whatsapp