ಪಾಟ್ನಾ: ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗಲಿರುವ 2021 ರ ಜನಗಣತಿಯನ್ನು ಜಾತಿ ಆಧಾರಿತವಾಗಿ ಮಾಡಬೇಕು. ಇದು ವಿವಿಧ ಜಾತಿಗಳಿಗೆ ಸೇರಿದ ಜನರಿಗೆ ಸಹಾಯ ಮಾಡಲು ಸಹಕಾರಿಯಾಗುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಆಡಳಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಾತಿ ಆಧಾರಿತ ಜನಗಣತಿ ಅಗತ್ಯ ಎಂದು ಅವರು ಹೇಳಿದ್ದಾರೆ.
“ಜಾತಿ ಆಧಾರಿತ ಗಣತಿಯನ್ನು ಒಮ್ಮೆ ಮಾಡಬೇಕು. ಇದು ಸರಿಯಾದ ಮಾಹಿತಿಯನ್ನು ನೀಡುತ್ತದೆ. ಎಷ್ಟು ಜನರು ಯಾವ ಜಾತಿಗೆ ಸೇರಿದವರು ಮತ್ತು ಅವರಿಗೆ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲು ಸುಲಭವಾಗುತ್ತದೆ” ಎಂದು ಸುದ್ದಿಗಾರರೊಂದಿಗೆ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯದ ಮೊದಲು ಜಾತಿ ಆಧಾರಿತ ಜನಗಣತಿ ನಡೆಯುತ್ತಿತ್ತು. ಅದು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.