ಗೌಪ್ಯತೆ ನೀತಿ: ಬದಲಾವಣೆಯನ್ನು ಹಿಂಪಡೆಯಲು ವಾಟ್ಸಾಪ್ ಅನ್ನು ಒತ್ತಾಯಿಸಿದ ಕೇಂದ್ರ ಸರಕಾರ

Prasthutha|

- Advertisement -

ವಾಟ್ಸಾಪ್ ಗೌಪ್ಯತೆ ನೀತಿಯ ಬಗ್ಗೆ ಕೇಂದ್ರ ಸರಕಾರ ವಾಟ್ಸಾಪ್ ನಿಂದ ವಿವರಣೆಯನ್ನು ಕೋರಿದೆ. ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಸಿಇಒಗೆ ಪತ್ರ ಕಳುಹಿಸಿದೆ. ಗೌಪ್ಯತೆ, ಡೇಟಾ ವರ್ಗಾವಣೆ ಮತ್ತು ಹಂಚಿಕೆ ನೀತಿಗಳ ಕುರಿತು ಸ್ಪಷ್ಟಪಡಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ. ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಯನ್ನು ಹಿಂಪಡೆಯಬೇಕೆಂದು ಭಾರತ ಬಯಸಿದೆ. ಇಂತಹ ಏಕಪಕ್ಷೀಯ ಬದಲಾವಣೆಗಳು ಸ್ವೀಕಾರಾರ್ಹವಲ್ಲ ಎಂದು ಕೇಂದ್ರೀಯ ವಿದ್ಯುನ್ಮಾನ ಸಚಿವಾಲಯ ವಾಟ್ಸಾಪ್ ಸಿಇಒ ವಿಲ್ ಕ್ಯಾತ್‌ಚಾರ್ಟ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಾಟ್ಸಾಪ್ ಬಳಕೆದಾರರನ್ನು ಹೊಂದಿದೆ. ಗೌಪ್ಯತೆ ನೀತಿಯ ವಾಟ್ಸಾಪ್‌ನ ಇತ್ತೀಚಿನ ಬದಲಾವಣೆಯು ದೇಶಾದ್ಯಂತ ಜನರ ಗೌಪ್ಯತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ವಾಟ್ಸಾಪ್ ಸಿಇಒಗೆ ಪತ್ರ ಕಳುಹಿಸಿದೆ. ಹೊಸ ನೀತಿಯನ್ನು ಅಂಗೀಕರಿಸದವರ ಸೇವೆ ಈ ತಿಂಗಳು ಕೊನೆಗೊಳ್ಳಲಿದೆ ಎಂದು ವಾಟ್ಸಾಪ್ ಈ ಹಿಂದೆ ಸೂಚಿಸಿತ್ತು. ವ್ಯಾಪಕ ಟೀಕೆಗಳು ಮತ್ತು ಬಳಕೆದಾರರಿಂದ ವಾಟ್ಸಾಪ್ ಬಳಕೆಯ ಹೆಚ್ಚಳದಿಂದಾಗಿ ಇದನ್ನು ಮೇ ವರೆಗೆ ವಿಸ್ತರಿಸಲಾಗಿದೆ.

Join Whatsapp