ಖಲಿಸ್ತಾನ ಬೆಂಬಲಿಸಿ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಹಾಕಿದ್ದ ವ್ಯಕ್ತಿ ವಿರುದ್ಧ ‌FIR

Prasthutha|

ಲಖನೌ: ಖಲಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಫೋಟೊ ಹಾಕಿದ್ದ ಉತ್ತರ ಪ್ರದೇಶದ ಪಿಲಿಭಿತ್‌ ನ ವ್ಯಕ್ತಿಯ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಆರೋಪಿಯನ್ನು ಗುರ್ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ.

ಡಿಸೆಂಬರ್ 23ರಂದು ಪಿಲಿಭಿತ್‌ ನ ಪುರನ್‌ ಪುರ ಪ್ರದೇಶದಲ್ಲಿ ಉತ್ತರ ಪ್ರದೇಶ ಪೊಲೀಸರು ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಖಲಿಸ್ತಾನ ಬೆಂಬಲಿಗರನ್ನು ಎನ್‌ ಕೌಂಟರ್‌ ನಲ್ಲಿ ಮೃತಪಟ್ಟರು. ಈ ಘಟನೆಯ ಬಳಿಕ ಗುರ್ಸೇವಕ್ ಸಿಂಗ್ ತಮ್ಮ ಫೇಸ್‌ ಬುಕ್‌ ಪುಟದಲ್ಲಿ ಖಲಿಸ್ತಾನವನ್ನು ಬೆಂಬಲಿಸುವ ಫೋಸ್ಟ್‌ ಗಳನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೋತ್ವಾಲಿ ಪೊಲೀಸ್‌ ಠಾಣಾಧಿಕಾರಿ ರಾಜೀವ್ ಕುಮಾರ್ ಸಿಂಗ್ ಹೇಳಿದ್ದಾರೆ.



Join Whatsapp