ಭೋಪಾಲ್: ಐಸಿಎಂಆರ್ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಪ್ರಯೋಗದಲ್ಲಿ ಭಾಗವಹಿಸಿದ ದೀಪಕ್ ಮರಾವಿ ಎಂಬ ಯುವಕ ಮೃತಪಟ್ಟಿದ್ದಾರೆ. ಅವನು ಜಮಾಲ್ಪುರ ಸುಬೇದಾರ್ ಕಾಲೋನಿಯಲ್ಲಿರುವ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಯುವಕನ ದೇಹದಲ್ಲಿ ವಿಷದ ಅಂಶಗಳು ಕಂಡುಬಂದಿವೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
“ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಾವಿಗೆ ವ್ಯಾಕ್ಸಿನ್ ಸ್ವೀಕರಿಸಿರುವುದು ಕಾರಣವಲ್ಲ” ಎಂದು ಪೀಪಲ್ಸ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಅನಿಲ್ ದೀಕ್ಷಿತ್ ಹೇಳಿದ್ದಾರೆ. ಆದರೆ ಆಂತರಿಕ ಅಂಗಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋವಿಡ್ ಪ್ರೋಟೋಕಾಲ್ ಪ್ರಕಾರ ತಂದೆಯವರು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ನಿಧನರಾಗಿದ್ದಾರೆ ಎಂದು ದೀಪಕ್ ಅವರ ಮಗ ಆಕಾಶ್ ಹೇಳಿದ್ದಾನೆ. ದೀಪಕ್ ಭೋಪಾಲ್ ಅನಿಲ ದುರಂತದ ಸಂತ್ರಸ್ತರಾಗಿದ್ದಾರೆ.