ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಕಟ್ಟಿದ ದೀಪ್ ಸಿಧುಗೆ ಬಿಜೆಪಿಯೊಂದಿಗೆ ನಂಟು !

Prasthutha|

ರೈತ ಮುಖಂಡರ ಇಚ್ಛೆಗೆ ವಿರುದ್ಧವಾಗಿ ಕೆಂಪುಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಧ್ವಜಸ್ತಂಭಕ್ಕೆ ಕಟ್ಟಿದ ದೀಪ್ ಸಿಧು ಬಿಜೆಪಿಯೊಂದಿಗೆ ನಿಟಕ ಸಂಪರ್ಕ ಹಾಗೂ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.
ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ದೀಪು ಸಿಂಗ್ ಪ್ರಧಾನಿ ಮೋದಿ ಜತೆ ಹಾಗೂ ಇನ್ನೊಂದು ಫೋಟೋದಲ್ಲಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ದೀಪ್ ಸಿಧು ಇಂದು ಕೆಂಪುಕೋಟೆಗೆ ಯುವಕರ ತಂಡವನ್ನು ಮುನ್ನಡೆಸಿದ್ದು ಅಲ್ಲಿ ಸಿಖ್ ಧರ್ಮದ ಧ್ವಜವನ್ನು ಹಾರಿಸಿದ್ದಾನೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ರೈತರ ಪ್ರತಿಭಟನೆಗೆ ಅಗೌರವ ತರಲು ಸಿಧು ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹಲವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ನಡೆದ ಟ್ರಾಕ್ಟರ್ ಪರೇಡ್ ನಲ್ಲಿ ಶೇಕಡಾ 99.9ರಷ್ಟು ರೈತರು ಶಿಸ್ತುಬದ್ದವಾಗಿ ವರ್ತಿಸಿದ್ದಾರೆ. ಪೊಲೀಸರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಡೆದುಕೊಂಡಿದ್ದಾರೆ. ಆದರೆ ಕೆಲವು ದುಷ್ಕರ್ಮಿಗಳು ರೈತರ ಚಳವಳಿಯಲ್ಲಿ ನುಸುಳಿ ಅತಿರೇಕದ ವರ್ತನೆ ತೋರಿದ್ದಾರೆ. ಕೆಲವು ಗೋದಿ ಮಾಧ್ಯಮಗಳು, ಬಿಜೆಪಿ ವಕ್ತಾರ ಮಾಧ್ಯಮಗಳು ಇಡೀ ಚಳವಳಿಗೆ ಅಗೌರವ ತರುವ ಕೆಲಸ ಮಾಡುತ್ತಿವೆ ಎಂದು ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.



Join Whatsapp