ಕುಖ್ಯಾತ ಕಳ್ಳರ ಬಂಧನ: 1.1 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಶ

Prasthutha|

ಬೆಂಗಳೂರು: ಮನೆಯ ಬಾಗಿಲಿಗೆ ಹೊಂದಿಕೊಂಡಿರುವ ಕಿಟಕಿಗಳ ಮೂಲಕ ಕೈ ಹಾಕಿ ಬಾಗಿಲ ಚೀಲಕ ತೆಗೆದು ಕಳವು ಮಾಡುತ್ತಿದ್ದ ಕುಖ್ಯಾತ ಮೂವರು ಕಳ್ಳರನ್ನು ಸಂಜಯನಗರ ಪೊಲೀಸರು ಭರ್ಜರಿ ಬೇಟೆಯಾಡಿ ಬಂಧಿಸಿ 1.1 ಕೋಟಿ ಮೌಲ್ಯದ 1.267 ಕೆ.ಜಿ.ಚಿನ್ನ, 900 ಗ್ರಾಂ ಬೆಳ್ಳಿ ಇನ್ನಿತರ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -


ಹೈದರಾಬಾದ್ ನ ನಾನಾವತ್ ವಿನೋದ್ ಕುಮಾರ್ (25) ಹಾಗೂ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ (26) ತಮಿಳುನಾಡು ಮೂಲದ ಇಸೈರಾಜ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತಮಿಳುನಾಡು ಮೂಲದ ಇಸೈರಾಜ್ ನಿಂದ 30.87 ಲಕ್ಷ ರೂ. ಬೆಲೆ ಬಾಳುವ 475 ಗ್ರಾಂ ತೂಕದ ಚಿನ್ನಾಭರಣ, 900 ಗ್ರಾಂ ಬೆಳ್ಳಿ ಒಡವೆಗಳು, 1-ಲ್ಯಾಪ್ಟಾಪ್, ಪ್ರಸಿದ್ಧ ಕಂಪನಿಗಳ 8 ದುಬಾರಿ ಬೆಲೆಯ ವಾಚ್ಗಳು 2-ಕ್ಯಾಮೆರಾ, 3-ಫ್ಲೇ ಸ್ಟೇಷನ್, ವಶಪಡಿಸಿಕೊಳ್ಳಲಾಗಿದೆ.


ಕಳೆದ ಮಾರ್ಚ್ ನಲ್ಲಿ ಸಂಜಯನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ಕಳವು ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಯನ್ನು ಬಂಧಿಸಿ ನೀಡಿದ ಮಾಹಿತಿ ಮೇರೆಗೆ ಸುಮಾರು 30.87 ಲಕ್ಷ ರೂ. ಬೆಲೆ ಬಾಳುವ 475 ಗ್ರಾಂ ತೂಕದ ಚಿನ್ನಾಭರಣ, 900 ಗ್ರಾಂ ಬೆಳ್ಳಿ ಒಡವೆಗಳು, 1-ಲ್ಯಾಪ್ಟಾಪ್, ಪ್ರಸಿದ್ಧ ಕಂಪನಿಗಳ 8 ದುಬಾರಿ ಬೆಲೆಯ ವಾಚ್ಗಳು 2-ಕ್ಯಾಮೆರಾ, 3-ಫ್ಲೇ ಸ್ಟೇಷನ್, ವಶಪಡಿಸಿಕೊಳ್ಳಲಾಗಿತ್ತು.

- Advertisement -


ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ತಮಿಳುನಾಡಿನವನಾಗಿದ್ದು, ಕುಟುಂಬ ಸಮೇತ ಅಮೃತಹಳ್ಳಿಯಲ್ಲಿ ವಾಸವಾಗಿರುವುದು ಪತ್ತೆಯಾಗಿದೆ. 2020 ನೇ ಸಾಲಿನಲ್ಲಿ ಸಂಪಿಗೇಹಳ್ಳಿ ಮತ್ತು ಯಲಹಂಕ ಪೊಲೀಸ್ ಠಾಣೆಯ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದು ಗಾಂಜಾ ಮತ್ತು ಡ್ರಗ್ಸ್ ವ್ಯಸನಿಯಾಗಿದ್ದರಿಂದ ಈ ವ್ಯಸನವನ್ನು ಬಿಡಿಸಲು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿರುತ್ತಾರೆ. ಅಲ್ಲಿಂದ ಬಂದ ನಂತರ ದೈನಂದಿನ ಖರ್ಚಿನ ಹಣಕ್ಕಾಗಿ ಬಾಗಿಲ ಕಿಟಕಿ ತೆರೆದಿರುವ ಮನೆಗಳನ್ನು ಗುರುತಿಸಿಕೊಂಡು ಕಿಟಕಿಯ ಮೂಲಕ ಕೈ ಹಾಕಿ ಬಾಗಿಲ ಚೀಲಕವನ್ನು ತೆಗೆದು ಮನೆಯೊಳಗೆ ಹೋಗಿ ಕೃತ್ಯವೆಸಗುವಾಗ ಯಾವುದೇ ವಸ್ತುಗಳನ್ನು ಚೆಲ್ಲಾಪಿಲ್ಲಿ ಬೀಸಾಡದೇ ಮನೆಯವರಿಗೆ ಕಳವಾಗಿರುವ ಬಗ್ಗೆ ಗೊತ್ತಾಗದೇ ಮನೆಯಲ್ಲಿರುವ ಚಿನ್ನಾಭರಣಗಳನ್ನು, ಮೌಲ್ಯಯುತ ವಸ್ತುಗಳನ್ನು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿತ್ತು.


ಇನ್ನಿಬ್ಬರು ಬಂಧಿತ ಹೈದರಾಬಾದ್ ನ ನಾನಾವತ್ ವಿನೋದ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ ನಿಂದ 19 ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣಗಳು, 2-ಮನೆಕಳವು 1-ದ್ವಿಚಕ್ರವಾಹನ ಕಳವು ಪ್ರಕರಣ ಸೇರಿ 22 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಗಳನ್ನು ಕತ್ತರಿಸಿ, ಸುಮಾರು 60 ಗ್ರಾಂ ತೂಕದ ಚಿನ್ನಾಭರಣ, 15 ಸಾವಿರ ನಗದು, ವಾಚ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಪ್ರಕರಣ ಸಂಜಯನಗರ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿ ವಿಶೇಷ ಕಾರ್ಯಾಚರಣೆ ಕೈಗೊಂಡು ಆರೋಪಿಗಳು ಕೃತ್ಯವೆಸಗಲು ಹೋಗುತ್ತಿದ್ದಾಗ ಬೆನ್ನತ್ತಿ ಓರ್ವ ನನ್ನು ಬಂಧಿಸಿ ಆತನ ಮಾಹಿತಿ ಮೇರೆಗೆ ಮತ್ತೊಬ್ಬನನ್ನು ಬಂಧಿಸಲಾಯಿತು.


ಅವರಿಂದ 79.64 ಲಕ್ಷ ರೂ. ಬೆಲೆ ಬಾಳುವ 792 ಗ್ರಾಂ ಚಿನ್ನ 3-ಲ್ಯಾಪ್ಟಾಪ್, ವಿವಿಧ ಕಂಪನಿಯ 10 ಮೊಬೈಲ್ ಫೋನ್ಗಳು, 6 ಐ-ಪ್ಯಾಡ್ಗಳು, ಪ್ರಸಿದ್ಧ ಕಂಪನಿಗಳ 30 ದುಬಾರಿ ಬೆಲೆಯ ವಾಚ್ಗಳು (ಓಮೆಗಾ, ರೋಲೆಕ್ಸ್, ಅಪ್ಯಲ್, ಪಾಜಿಲ್, ಸ್ವೀಜ್, ಟಿಸಾಟ್) 2-ಕೆನಾನ್ ಕ್ಯಾಮೆರಾ, 7-ಗಾಗಲ್ಸ್ಗಳು, 1-ಫ್ಲೇ ಸ್ಟೇಷನ್, 2-ದ್ವಿಚಕ್ರವಾಹನಗಳು ಹಾಗೂ ನಗದು 2 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿನೋದ್ ಕುಮಾರ್ ಹೈದರಬಾದ್ನವನಾಗಿದ್ದು, 2015 ನೇ ಸಾಲಿನಲ್ಲಿ 6 ಮನೆ ಕಳವು ದ್ವಿಚಕ್ರವಾಹನ ಜೈಲಿಗೆ ಹೋಗಿ ಹೊರ ಬಂದ ನಂತರ ಮನೆಯವರು ಹೊರ ಹಾಕಿದಾಗ 2016 ನೇ ಸಾಲಿನಲ್ಲಿ ಕೋಲ್ಕತ್ತಾಗೆ ಡ್ರೈವಿಂಗ್ ಕೆಲಸ ಮಾಡಿಕೊಂಡಿರುವಾಗ ಬಾಂಗ್ಲಾ ದೇಶದ ಹುಡುಗಿ ಪರಿಚಯವಾಗಿ ಆಕೆಯಿಂದ ರೋಹಿತ್ ಮಂಡಲ್ ಪರಿಚಯವಾಗಿ 2019 ನೇ ಸಾಲಿನಲ್ಲಿ ಈ ಎಲ್ಲಾರೂ ಬಾಂಗ್ಲಾ ದೇಶಕ್ಕೆ ಹೋಗಿರುತ್ತಾರೆ.

Join Whatsapp