ಕರ್ನಾಟಕ: ಧಾರಕಾರ ಮಳೆಗೆ ಮೂರು ಸಾವು, ಹಲವೆಡೆ ಆರೆಂಜ್ ಅಲರ್ಟ್ ಘೋಷಣೆ

Prasthutha|

ಬೆಂಗಳೂರು: ಕಳೆದ 48 ಗಂಟೆಗಳಲ್ಲಿ ರಾಜ್ಯದಲ್ಲಿಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಮೂರು ಜನರು ಸಾವನ್ನಪ್ಪಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಾದ್ಯಂತ ಜೂನ್ 22 ರವರೆಗೆ ಮುನ್ಸೂಚನೆ ನೀಡಿದೆ.

- Advertisement -

ಮಹದೇವಪುರದಲ್ಲಿ ಗೋಡೆ ಕುಸಿದು 24 ವರ್ಷದ ಸಿವಿಲ್ ಇಂಜಿನಿಯರ್ ಮಿಥುನ್ ಕುಮಾರ್, ಕೆ .ಆರ್. ಪುರಂ ನಲ್ಲಿ ಧಾರಾಕಾರ ಮಳೆಯ ಪರಿಣಾಮ ಗೋಡೆ ಕುಸಿದು ವಿ.ಮುನಿಯಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ ಹಾಗೂ ಬೆಂಗಳೂರು ನಗರದಿಂದ 50 ಕಿಮೀ ದೂರದಲ್ಲಿರುವ ಮಾಗಡಿ ಪಟ್ಟಣದಲ್ಲಿ ತುಂಬಿ ಹರಿಯುತ್ತಿದ್ದ ಕೆರೆಗೆ ಕಾರು ಉರುಳಿ ಬಿದ್ದ ಪರಿಣಾಮ ಎಂ ಟೆಕ್ ವಿದ್ಯಾರ್ಥಿ ಪ್ರಜ್ವಲ್ ಮೃತಪಟ್ಟಿದ್ದಾರೆ.

ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ ಕೊಡಗು, ತುಮಕೂರು, ಮಂಡ್ಯ, ಶಿವಮೊಗ್ಗ, ದಾವಣಗೆರೆ ಚಿತ್ರದುರ್ಗದಲ್ಲಿ ಭಾನುವಾರದಿಂದ ಜೂನ್ 22 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

- Advertisement -

ಈ ಮಧ್ಯೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.



Join Whatsapp