ಕರಾಳ ಕೃಷಿ ಕಾನೂನಿಗೆ ವಿರೋಧ: ಎಸ್.ಡಿ.ಪಿ.ಐ ಯಿಂದ ಜಿಲ್ಲಾದ್ಯಂತ ಜಾಗೋ ಕಿಸಾನ್ ಅಭಿಯಾನ

Prasthutha|


ಮಂಗಳೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಕರಾಳ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಕ್ಟೋಬರ್ ತಿಂಗಳಿನಲ್ಲಿ “ಕೃಷಿ ಸಂಹಾರ ಬಿಜೆಪಿಯ ಹುನ್ನಾರ” ಎಂಬ ವ್ಯಾಖ್ಯೆಯೊಂದಿಗೆ ದೇಶಾದ್ಯಂತ “ಜಾಗೋ ಕಿಸಾನ್” ಅಭಿಯಾನವನ್ನು ಕೈಗೊಂಡಿದೆ.
ಇದರ ಭಾಗವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಂತ ಬಿತ್ತಿಪತ್ರ ಅಂಟಿಸುವುದು, ಕರಪತ್ರ ವಿತರಣೆ, ರೈತ ಮತ್ತು ಸಮಾನಮನಸ್ಕ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನಾ ಸಭೆ, ಪಾದಯಾತ್ರೆ, ಕಾರ್ನರ್ ಮೀಟ್, ಮಾನವ ಸರಪಳಿ ಈ ರೀತಿಯ ವಿವಿಧ ಕಾರ್ಯಕರಮಗಳನ್ನು ನಡೆಸಲಿದೆ.
ಜಿಲ್ಲೆಯಲ್ಲಿ ಕಡಬ ತಾಲೂಕಿನ ಕೊಂಬಾರ್ ಗ್ರಾಮದ ಗದ್ದೆಯಿಂದ ಅಭಿಯಾನಕ್ಕೆ ವಿಭಿನ್ನ ರೀತಿಯಲ್ಲಿ ಚಾಲನೆ ದೊರೆಯಲಿದೆ. =ಅಕ್ಟೋಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾದ್ಯಂತ ನಾನಾ ಕಡೆಗಳಲ್ಲಿ ಮಾನವ ಸರಪಳಿ ನಡೆಸುವುದರೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಜಾಗೋ ಕಿಸಾನ್ ಅಭಿಯಾನದ ಜಿಲ್ಲಾ ಉಸ್ತುವಾರಿ ಆಂಟನಿ ಪಿಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp