ಕಮಲನಾಥ್ ವಿರುದ್ಧ ಪ್ರಕರಣ ದಾಖಲಿಸಲು ಮ.ಪ್ರ. ಹೈಕೋರ್ಟ್ ಆದೇಶ

Prasthutha|

ಭೋಪಾಲ್ : ತಿಂಗಳ ಆರಂಭದಲ್ಲಿ ಚುನಾವಣಾ ಪ್ರಚಾರ ವೇಳೆ ಕೋವಿಡ್ – 19 ನಿಯಮ ಉಲ್ಲಂಘಿಸಿದ್ದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲನಾಥ್ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ.

- Advertisement -

ಗ್ವಾಲಿಯಾರ್ ಮತ್ತು ಡಾಟಿಯಾ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಈ ನಿಟ್ಟಿನಲ್ಲಿ ಕೋರ್ಟ್ ನಿರ್ದೇಶನ ನೀಡಿದೆ. ಶುಕ್ರವಾರದ ಮುಂದಿನ ವಿಚಾರಣೆಯ ವೇಳೆ ಈ ಸಂಬಂಧ ವರದಿ ನೀಡುವಂತೆ ಅಡ್ವೊಕೇಟ್ ಜನರಲ್ ಪುರುಶೇಂದ್ರ ಕೌರವ್ ಗೆ ಕೋರ್ಟ್ ಸೂಚಿಸಿದೆ.

ವರ್ಚುವಲ್ ರ್ಯಾಲಿ ಸಾಧ್ಯವಿಲ್ಲ ಎಂದು ಸಾಬೀತು ಪಡಿಸದ ಹೊರತಾಗಿ, ಗ್ವಾಲಿಯಾರ್ ವಿಭಾಗದ ಎಲ್ಲಾ 9 ಜಿಲ್ಲೆಗಳಲ್ಲಿ ಯಾವುದೇ ಬಹಿರಂಗ ಚುನಾವಣೆ ಸಭೆಗಳಿಗೆ ಅನುಮತಿ ನೀಡದಂತೆ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಕೋರ್ಟ್ ಆದೇಶಿಸಿದೆ.

- Advertisement -

ನ.3ರಂದು ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನ.10ಕ್ಕೆ ಫಲಿತಾಂಶ ಹೊರಬೀಳಲಿದೆ. ದಾಬ್ರಾ ವಿಭಾನಸಭಾ ಕ್ಷೇತ್ರದ ಅಭ್ಯರ್ಥಿ ಇಮಾರ್ತಿ ದೇವಿ ಬಗ್ಗೆ ‘ಐಟಂ’ ಎಂದು ಪ್ರಸ್ತಾಪಿಸುವ ಮೂಲಕ ಕಮಲನಾಥ್ ಈಗಾಗಲೇ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.



Join Whatsapp